ADVERTISEMENT

ಹಾಂಗ್‌ಕಾಂಗ್‌: ನಿಲ್ಲದ ಪ್ರತಿಭಟನೆ, ಅಶ್ರುವಾಯು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 19:05 IST
Last Updated 11 ಆಗಸ್ಟ್ 2019, 19:05 IST
ಹಾಂಗ್‌ಕಾಂಗ್‌ನಲ್ಲಿ ಭಾನುವಾರ ಪ್ರತಿಭಟನಾನಿರತ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು  –ರಾಯಿಟರ್ಸ್‌ ಚಿತ್ರ.Anti-extradition bill protesters react from tear gas as riot police try to disperse them during a protest at Sham Shui Po in Hong Kong, China August 11, 2019. REUTERS/Tyrone Siu
ಹಾಂಗ್‌ಕಾಂಗ್‌ನಲ್ಲಿ ಭಾನುವಾರ ಪ್ರತಿಭಟನಾನಿರತ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು  –ರಾಯಿಟರ್ಸ್‌ ಚಿತ್ರ.Anti-extradition bill protesters react from tear gas as riot police try to disperse them during a protest at Sham Shui Po in Hong Kong, China August 11, 2019. REUTERS/Tyrone Siu   

ಹಾಂಗ್‌ಕಾಂಗ್‌ (ಎಪಿ): ಹಿಂಸಾಚಾರ ವಿರೋಧಿಸಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ಹಾಂಗ್‌ಕಾಂಗ್‌ನಲ್ಲಿ ಕಳೆದ ಒಂಬತ್ತು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆ ಅಂತ್ಯಗೊಳ್ಳುವ ಸೂಚನೆಗಳಿಲ್ಲ.

ಭಾನುವಾರ ನಗರದ ಎರಡು ಕಡೆ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಶಾಮ್‌ ಶೂಯಿ ಪೊ ಪ್ರದೇಶದಿಂದ ಹೊರನಡೆಯಬೇಕು ಎಂಬ ಸೂಚನೆ ಧಿಕ್ಕರಿಸಿ ಅಧಿಕಾರಿಗಳತ್ತ ಕಲ್ಲು ತೂರಿದ ಗುಂಪು ಚದುರಿಸಲು ಅಶ್ರುವಾಯು ಸಿಡಿಸಲಾಯಿತು.

ವಿಕ್ಟೋರಿಯ ಹಾರ್ಬರ್‌ ಬಳಿ ಸೇರಿದ ದೊಡ್ಡ ಗುಂಪು ಪ್ರಮುಖ ವಾಣಿಜ್ಯ ಚಟುವಟಿಕೆಯ ತಾಣವಾದ ಹೆನ್ನೆಸ್ಸೆ ರಸ್ತೆಯವರೆಗೂ ಮೆರವಣಿಗೆ ನಡೆಸಿತು. ವಿಕ್ಟೋರಿಯ ಪಾರ್ಕ್‌ ಬಳಿ ಸಮಾವೇಶ ನಡೆಸಲು ಪ್ರತಿಭಟನಾಕಾರರು ಉದ್ದೇಶಿಸಿದ್ದರು.

ADVERTISEMENT

ಬಹುತೇಕರು ತಮ್ಮ ಗುರುತು ಮರೆಮಾಚಲು ಮುಖವಾಡ ಧರಿಸಿ
ದ್ದರು. ಕೆಲವರು ಹೆಲ್ಮೆಟ್‌ ಧರಿಸಿದ್ದರು. ಇನ್ನೂ ಕೆಲವರು ಸಮವಸ್ತ್ರವೇ ಆಗಿರುವ ಟೀ ಶರ್ಟ್‌ ಧರಿಸಿ ಬಂದಿದ್ದರು.

‘ಹಾಂಗ್‌ಕಾಂಗ್‌ ಈ ಮೊದಲಿನ ಹಾಂಗ್‌ಕಾಂಗ್ ಆಗಿಯೇ ಉಳಿದಿಲ್ಲ ಎಂಬುದು ಜಗತ್ತಿಗೆ ತಿಳಿಯಬೇಕು‘ ಎಂದು ಪ್ರತಿಭಟನೆಯಲ್ಲಿದ್ದ ಲೌಸಾ ಹೊ ಹೇಳಿದರು. ‘ಹಾಂಗ್‌ಕಾಂಗ್‌ನ ಜನರು, ಸಂಘಟನೆಗಳ ಮೇಲೆ ಚೀನಾ ಹೆಚ್ಚಿನ ಒತ್ತಡ ಹೇರುತ್ತಿದೆ‘ ಎಂದು ದೂರಿದರು.

ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಬೇಕು, ಬಂಧಿತ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಬೇಕು, ಪೊಲೀಸ್‌ ಹಿಂಸಾಚಾರದ ವಿರುದ್ಧ ತನಿಖೆ ನಡೆಸಬೇಕು ಎಂಬುದು ಪ್ರತಿಭಟನಾಕಾರರು ಬೇಡಿಕೆಗಳಲ್ಲಿ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.