ADVERTISEMENT

ವರ್ಣಭೇದ ನೀತಿ: ಮಾಜಿ ಕಾರ್ಮಿಕನಿಗೆ ₹ 968 ಕೋಟಿ ನೀಡಲು ಟೆಸ್ಲಾ ಕಂಪನಿಗೆ ಆದೇಶ

ರಾಯಿಟರ್ಸ್
Published 5 ಅಕ್ಟೋಬರ್ 2021, 7:43 IST
Last Updated 5 ಅಕ್ಟೋಬರ್ 2021, 7:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕ್ಯಾಲಿಫೋರ್ನಿಯಾ: ವಿದ್ಯುನ್ಮಾನ ಕಾರು ತಯಾರಿಸುವ ಟೆಸ್ಲಾ ಕಂಪನಿಯು ತನ್ನ ಮಾಜಿ ಕೆಲಸಗಾರನಿಗೆ ₹ 968 ಕೋಟಿ (130 ಮಿಲಿಯನ್‌ ಡಾಲರ್‌) ಪರಿಹಾರ ನೀಡುವಂತೆ ಅಮೆರಿಕದ ಫೆಡರಲ್‌ ಕೋರ್ಟ್‌ ಆದೇಶ ನೀಡಿದೆ.

2015ರಿಂದ 2016ರವರೆಗೆ ಟೆಸ್ಲಾದ ಫ್ರೇಮಂಟ್‌ ಕಾರ್ಖಾನೆಯಲ್ಲಿ ಲಿಫ್ಟ್‌ ಆಪರೇಟರ್‌ ಆಗಿದ್ದ ಗುತ್ತಿಗೆ ಕೆಲಸಗಾರ,ಕಪ್ಪು ವರ್ಣೀಯ ಡಯಾಜ್ ಕಾರ್ಖಾನೆಯಲ್ಲಿ ಜನಾಂಗೀಯ ನಿಂದನೆ, ಕಿರುಕುಳಕ್ಕೆ ಒಳಗಾಗಿದ್ದರು.

ಜನಾಂಗೀಯ ನಿಂದನೆ ಮತ್ತು ಕಿರುಕುಳವನ್ನು ತಡೆಯುವಲ್ಲಿ ಕಂಪನಿಯು ಸಂಪೂರ್ಣವಾಗಿ ವಿಫಲವಾಗಿತ್ತು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

ADVERTISEMENT

ಕಳೆದ ವರ್ಷ ಕಂಪನಿಯ ವೈವಿಧ್ಯದ ಬಗ್ಗೆ ವರದಿ ನೀಡಿದ್ದ ಟೆಸ್ಲಾ, ತನ್ನ ಕಂಪನಿಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಶೇ 4ರಷ್ಟು ಮತ್ತು ಒಟ್ಟು ಸಿಬ್ಬಂದಿಯಲ್ಲಿ ಶೇ 10ರಷ್ಟು ಕಪ್ಪು ವರ್ಣೀಯರು ಮಾತ್ರ ಇದ್ದಾರೆ ಎಂದು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.