ADVERTISEMENT

ಕಾರು ಖರೀದಿಗೆ ಬಿಟ್‌ಕಾಯಿನ್‌ ರೂಪದಲ್ಲಿ ಹಣ ಪಾವತಿಸಬಹುದು: ಇಲಾನ್‌ ಮಸ್ಕ್‌

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 19:15 IST
Last Updated 24 ಮಾರ್ಚ್ 2021, 19:15 IST
ಬಿಟ್‌ಕಾಯಿನ್‌
ಬಿಟ್‌ಕಾಯಿನ್‌   

ನ್ಯೂಯಾರ್ಕ್: ‘ಅಮೆರಿಕದಲ್ಲಿ ಕಂಪನಿಯ ಕಾರುಗಳನ್ನು ಖರೀದಿಸುವವರು ಬಿಟ್‌ಕಾಯಿನ್‌ ರೂಪದಲ್ಲಿ ಹಣ ಪಾವತಿಸಬಹುದು’ ಎಂದು ಟೆಸ್ಲಾ ಕಂಪನಿಯ ಮುಖ್ಯಸ್ಥ ಇಲಾನ್‌ ಮಸ್ಕ್‌ ಬುಧವಾರ ಹೇಳಿದ್ದಾರೆ.

‘ಬಿಟ್‌ಕಾಯಿನ್‌ಗಳನ್ನು ಡಾಲರ್‌ ಆಗಿ ಪರಿವರ್ತಿಸುವುದಿಲ್ಲ. ಕಂಪನಿಯ ಆಂತರಿಕ ವ್ಯವಹಾರವನ್ನು ಸಹ ಬಿಟ್‌ಕಾಯಿನ್‌ಗಳ ಮೂಲಕವೇ ನಡೆಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

‘ಅಮೆರಿಕ ಹೊರತುಪಡಿಸಿ ಇತರ ದೇಶಗಳ ಗ್ರಾಹಕರಿಗೆ ವರ್ಷಾಂತ್ಯಕ್ಕೆ ಈ ಸೌಲಭ್ಯ ನೀಡಲಾಗುವುದು’ ಎಂದು ಮಸ್ಕ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.