ADVERTISEMENT

ಟೆಕ್ಸಾಸ್ | ದಿಢೀರ್‌ ಪ್ರವಾಹ: 24 ಮಂದಿ ಸಾವು, 20 ಬಾಲಕಿಯರು ನಾಪತ್ತೆ

ಏಜೆನ್ಸೀಸ್
Published 5 ಜುಲೈ 2025, 14:11 IST
Last Updated 5 ಜುಲೈ 2025, 14:11 IST
.
.   

ಕೆರ್ವಿಲ್ಲೆ (ಅಮೆರಿಕ): ಭಾರಿ ಮಳೆಯಿಂದಾಗಿ ಟೆಕ್ಸಾಸ್‌ ನಗರದಲ್ಲಿ ದಿಢೀರ್‌ ಪ್ರವಾಹ ‍ಪರಿಸ್ಥಿತಿ ಸೃಷ್ಟಿಯಾಗಿದ್ದು, ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ.

ನದಿ ತೀರದ ಬೇಸಿಗೆ ಶಿಬಿರದಿಂದ ನಾಪತ್ತೆಯಾಗಿರುವ ಕನಿಷ್ಠ 20 ಬಾಲಕಿಯರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ರಕ್ಷಣಾ ತಂಡವು ಅತಂತ್ರರಾಗಿ ಸಿಲುಕಿರುವ ಜನರನ್ನು ಪತ್ತೆ ಮಾಡಿ ರಕ್ಷಣೆಗೆ ಯತ್ನಿಸುತ್ತಿದೆ ಎಂದು ಹೇಳಿದರು.

ADVERTISEMENT

‘ಮೃತರಲ್ಲಿ ಮಕ್ಕಳೂ ಸೇರಿದ್ದಾರೆ. 500 ಸಿಬ್ಬಂದಿ ಮತ್ತು 14 ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಟೆಕ್ಸಾಸ್‌ ಲೆಫ್ಟಿನೆಂಟ್ ಗವರ್ನರ್‌ ಡನ್‌ ಪ್ಯಾಟ್ರಿಕ್‌ ತಿಳಿಸಿದರು.

ಈವರೆಗೆ 237 ಜನರನ್ನು ರಕ್ಷಿಸಲಾಗಿದೆ ಮತ್ತು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಟೆಕ್ಸಾಸ್‌ ಸೇನಾ ಅಧಿಕಾರಿ ಮೇಜರ್‌ ಜನರಲ್‌ ಥಾಮಸ್‌ ಸುಯೆಲ್ಜರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.