ಸಾವು
ಪ್ರಾತಿನಿಧಿಕ ಚಿತ್ರ
ಆಸ್ಟಿನ್(ಅಮೆರಿಕ): ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದ ಪಾರ್ಕಿಂಗ್‌ವೊಂದರಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಳಿಸಿದ್ದಾರೆ.
ಕಾರು ಕದ್ದೊಯ್ಯುತ್ತಿದ್ದ ಆತನನ್ನು ನಗರದ ಹೊರವಲಯದಲ್ಲಿ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.
ಬಂಧಿತ ಶಂಕಿತನಿಗೆ ಸುಮಾರು 30 ವರ್ಷ ವಯಸ್ಸಾಗಿದ್ದು, ಮಾನಸಿಕ ಸಮಸ್ಯೆ ಹೊಂದಿರುವ ಇತಿಹಾಸವಿದೆ ಎಂದು ಆಸ್ಟಿನ್ ನಗರದ ಪೊಲೀಸ್ ಮುಖ್ಯಸ್ಥರಾದ ಲಿಸಾ ಡೇವಿಡ್ ತಿಳಿಸಿದ್ದಾರೆ.
ಗುಂಡು ಹಾರಿಸಿದ ಬಳಿಕ ಕದ್ದ ಕಾರಿನಲ್ಲಿ ಸ್ಥಳದಿಂದ ಕಾಲ್ಕಿತ್ತ ವ್ಯಕ್ತಿ, ಬಳಿಕ, ಅದನ್ನು ಎಲ್ಲಿಯೋ ಬಿಟ್ಟು ಮತ್ತೊಂದು ಕಾರನ್ನೂ ಕದ್ದಿದ್ದ. ಬಳಿಕ, ದಕ್ಷಿಣ ಆಸ್ಟಿನ್‌ನ 32 ಕಿ.ಮೀ ದೂರದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ.
ಪಾರ್ಕಿಂಗ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದು ಮೂವರು ಮೃತಪಟ್ಟಿದ್ದಾರೆ ಎಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕರೆಬಂದಿತ್ತು ಎಂದು ಲಿಸಾ ತಿಳಿಸಿದ್ದಾರೆ.
ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಆಸ್ಟಿನ್ ಟ್ರಾವಿಸ್ ಕೌಂಟಿಯ ತುರ್ತು ವೈದ್ಯಕೀಯ ಸೇವೆಯ ಮುಖ್ಯಸ್ಥ ರಾಬರ್ಟ್ ಲುಕ್ರಿಟ್ಜ್ ತಿಳಿಸಿದ್ದಾರೆ.
ಇದು ಆಸ್ಟಿನ್ ನಗರಕ್ಕೆ ಅತ್ಯಂತ ದುಃಖದ ದಿನ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.