ADVERTISEMENT

ಚಿಕಿತ್ಸೆ, ಲಸಿಕೆ ಕೊರತೆ: ಥಾಯ್ಲೆಂಡ್‌ನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆ

ಏಜೆನ್ಸೀಸ್
Published 3 ಜುಲೈ 2021, 6:46 IST
Last Updated 3 ಜುಲೈ 2021, 6:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬ್ಯಾಂಕಾಕ್‌:ಥಾಯ್ಲೆಂಡ್‌ನಲ್ಲಿ ಐಸಿಯು, ವೆಂಟಿಲೇಟರ್‌ನಂತಹ ಸೌಲಭ್ಯಗಳ ಕೊರತೆ ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಭಾರಿ ಸಮಸ್ಯೆ ಉಂಟಾಗಿದೆ. ಇನ್ನೊಂದೆಡೆ, ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕಾರಣ, ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿವೆ.

ಹೊಸದಾಗಿ 6,200 ಪ್ರಕರಣಗಳು ವರದಿಯಾಗಿದ್ದು, ಸತತ ಮೂರನೆಯ ದಿನವೂ ದಾಖಲೆ ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ಕಂಡುಬಂದಿವೆ.

ಕಳೆದ ಎರಡು ವಾರಗಳಿಂದ ತೀವ್ರ ನಿಗಾ ಘಟಕ ಮತ್ತು ವೆಂಟಿಲೇಟರ್‌ಗಳ ಕೊರತೆ ಕಂಡುಬಂದಿದೆ. ದೇಶದಾದ್ಯಂತ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಈ ವರೆಗೆ ಕೋವಿಡ್‌ನಿಂದ 41 ಮಂದಿ ಸಾವನ್ನಪ್ಪಿದ್ದಾರೆ, ಒಟ್ಟು ಸಾವಿನ ಸಂಖ್ಯೆ 2,181ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಥಾಯ್ಲೆಂಡ್‌ನ ಶೇ 90ರಷ್ಟು ಭಾಗದಲ್ಲಿ ಏಪ್ರಿಲ್ ಆರಂಭದಲ್ಲಿ 2,71,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಈವರೆಗೆ ಕೋವಿಡ್‌ನಿಂದ ಸಂಭವಿಸಿರುವ ಸಾವಿನ ಪ್ರಕರಣಗಳಲ್ಲಿ ಶೇ 95 ರಷ್ಟು ಏಪ್ರಿಲ್‌ ತಿಂಗಳಲ್ಲೇ ದಾಖಲಾಗಿವೆ. ಜೂನ್‌ನಲ್ಲಿ 992 ಸಾವು ಸಂಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.