ADVERTISEMENT

ಕಾಂಬೋಡಿಯಾ ರಾಕೆಟ್ ದಾಳಿ: ಥಾಯ್ ಪ್ರಜೆ ಸಾವು

ಏಜೆನ್ಸೀಸ್
Published 14 ಡಿಸೆಂಬರ್ 2025, 13:10 IST
Last Updated 14 ಡಿಸೆಂಬರ್ 2025, 13:10 IST
<div class="paragraphs"><p>ಕಾಂಬೋಡಿಯಾದ ದಾಳಿಯಿಂದ ಮೃತಪಟ್ಟ ನಾಗರಿಕನ ಶರೀರದ ಜೊತೆಗೆ ರಾಯಲ್ ಥಾಯ್ ಸೈನಿಕರು</p></div>

ಕಾಂಬೋಡಿಯಾದ ದಾಳಿಯಿಂದ ಮೃತಪಟ್ಟ ನಾಗರಿಕನ ಶರೀರದ ಜೊತೆಗೆ ರಾಯಲ್ ಥಾಯ್ ಸೈನಿಕರು

   

ಕಂತರಲಕ್ (ಥಾಯ್ಲೆಂಡ್‌): ಕಾಂಬೋಡಿಯಾದಿಂದಭಾನುವಾರ ನಡೆದ ರಾಕೆಟ್ ದಾಳಿಯಲ್ಲಿ 63 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಥಾಯ್ಲೆಂಡ್‌ ಸರ್ಕಾರ ಹೇಳಿದೆ.

ಆಗ್ನೇಯ ಏಷ್ಯಾದ ಎರಡೂ ರಾಷ್ಟ್ರಗಳ ಗಡಿಯಲ್ಲಿ ಎರಡು ವಾರಗಳಿಂದ ಯುದ್ಧ ನಡೆಯುತ್ತಿದ್ದು, ಅದರ ಪರಿಣಾಮವಾಗಿ ಸಂಭವಿಸಿದ ಮೊದಲ ನಾಗರಿಕ ಸಾವು ಇದಾಗಿದೆ ಎಂದು ವರದಿಯಾಗಿದೆ.

ADVERTISEMENT

ಡಿಸೆಂಬರ್ 7ರಂದು ನಡೆದ ಸಂಘರ್ಷದಲ್ಲಿ ಇಬ್ಬರು ಥಾಯ್ ಸೈನಿಕರು ಗಾಯಗೊಂಡಿದ್ದರು. ಇದರ ನಂತರ ದೊಡ್ಡ ಪ್ರಮಾಣದಲ್ಲಿ ಸಂಘರ್ಷ ನಡೆಯುತ್ತಿದ್ದು, ಭಾನುವಾರವೂ ಮುಂದುವರೆದಿದೆ ಎಂದು ಉಭಯ ದೇಶಗಳು ದೃಢಪಡಿಸಿವೆ. ಗಡಿಗಳ ಪಕ್ಕದ ಭೂಮಿಗಾಗಿ ಎರಡೂ ದೇಶಗಳು ದೀರ್ಘಕಾಲದಿಂದಲೂ ಹೋರಾಟ ನಡೆಸುತ್ತಿವೆ.

ಕಳೆದ ವಾರ ನಡೆದ ಸಂಘರ್ಷದ ಸಮಯದಲ್ಲಿ ಎರಡೂ ಕಡೆಯ ಎರಡು ಡಜನ್‌ಗೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ವರದಿಯಾಗಿದೆ. ಅಲ್ಲದೆ, 5 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.