
ಪಿಟಿಐ
ಚುನಾವಣೆ
ಬ್ಯಾಂಕಾಕ್: ಥಾಯ್ಲೆಂಡ್ ಸಂಸತ್ತು ಶುಕ್ರವಾರ ವಿಸರ್ಜನೆಗೊಂಡಿದ್ದು, ಮುಂದಿನ ವರ್ಷದ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದೆ.
ಥಾಯ್ಲೆಂಡ್ ದೊರೆ ವಜಿರಲೊಂಗ್‌ಕಾರ್ನ್ ಅವರ ಒಪ್ಪಿಗೆ ದೊರೆತ ನಂತರ ಪ್ರಧಾನಿ ಅನುಟಿನ್ ಚರ್ನ್‌ವಿರಕುಲ್ ಅವರು ಸಂಸತ್ತನ್ನು ವಿಸರ್ಜಿಸಿದರು. ‘ನಾನು ಅಧಿಕಾರವನ್ನು ಜನರಿಗೆ ಹಿಂದಿರುಗಿಸಲು ಬಯಸುತ್ತೇನೆ’ ಎಂದು ಅನುಟಿನ್ ಅವರು ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂಸತ್ತು ವಿಸರ್ಜಿಸಲು ದೊರೆಯ ಒಪ್ಪಿಗೆ ಲಭಿಸಿದ 45ರಿಂದ 60 ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕು. ಈ ಅವಧಿಯಲ್ಲಿ ಅನುಟಿನ್ ನೇತೃತ್ವದ ಹಂಗಾಮಿ ಸರ್ಕಾರ ಆಡಳಿತವನ್ನು ನೋಡಿಕೊಳ್ಳಲಿದೆ. ಈ ಸರ್ಕಾರ ಸೀಮಿತ ಅಧಿಕಾರವನ್ನಷ್ಟೇ ಹೊಂದಿರಲಿದ್ದು, ಬಜೆಟ್‌ಗೆ ಅನುಮೋದನೆಯಂತಹ ಪ್ರಮುಖ ಅಧಿಕಾರ ಚಲಾಯಿಸುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.