ADVERTISEMENT

ಉಕ್ರೇನ್ ಮೇಲಿನ ಆಕ್ರಮಣ ಕೂಡಲೆ ನಿಲ್ಲಿಸುವಂತೆ ರಷ್ಯಾಗೆ ಐಸಿಜೆ ಆದೇಶ

ರಾಯಿಟರ್ಸ್
Published 16 ಮಾರ್ಚ್ 2022, 16:48 IST
Last Updated 16 ಮಾರ್ಚ್ 2022, 16:48 IST
   

ಆಮ್‌ಸ್ಟರ್‌ಡಮ್: ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನುತಕ್ಷಣವೇ ನಿಲ್ಲಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ಬುಧವಾರ ಉಕ್ರೇನ್ ದಾಖಲಿಸಿದ್ದ ಪ್ರಕರಣದ ಪ್ರಾಥಮಿಕ ನಿರ್ಧಾರದಲ್ಲಿ ರಷ್ಯಾಕ್ಕೆ ಆದೇಶಿಸಿದೆ.

‘ರಷ್ಯಾವು ಫೆಬ್ರುವರಿ 24, 2022 ರಂದು ಉಕ್ರೇನ್ ಭೂಪ್ರದೇಶದಲ್ಲಿ ಪ್ರಾರಂಭಿಸಿದ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು’ ಎಂದು ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದಾರೆ.

ತನ್ನ ನಿಯಂತ್ರಣದಲ್ಲಿರುವ ಅಥವಾ ಮಾಸ್ಕೋದಿಂದ ಬೆಂಬಲಿತವಾಗಿರುವ ಇತರ ಯಾವುದೇ ಪಡೆಗಳು ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಬಾರದು ಎಂದು ರಷ್ಯಾ ಖಚಿತಪಡಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ADVERTISEMENT

ದೇಶಗಳು ನ್ಯಾಯಾಲಯದ ತೀರ್ಪುಗಳು ಬದ್ಧವಾಗಿದ್ದರೂ,‌ ಸಹ ಅದನ್ನು ಜಾರಿಗೊಳಿಸಲು ಯಾವುದೇ ನೇರ ಮಾರ್ಗಗಳಿಲ್ಲ. ಅಪರೂಪದ ಸಂದರ್ಭಗಳಲ್ಲಿ ಕೆಲ ದೇಶಗಳು ಈ ಹಿಂದೆ ಅವುಗಳನ್ನು ನಿರ್ಲಕ್ಷಿಸಿದ ಉದಾಹರಣೆಗಳಿವೆ.

ಫೆಬ್ರುವರಿ 24ರಂದು ರಷ್ಯಾದ ಆಕ್ರಮಣವು ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಉಕ್ರೇನ್ ಮೊಕದ್ದಮೆಯನ್ನು ದಾಖಲಿಸಿತ್ತು.

ಪೂರ್ವ ಉಕ್ರೇನ್‌ನಲ್ಲಿ ನರಮೇಧವನ್ನು ತಡೆಯಲು ಕಾರ್ಯನಿರ್ವಹಿಸುತ್ತಿದ್ದೇವೆ ಎಂಬ ರಷ್ಯಾದ ಸ್ಪಷ್ಟ ಸಮರ್ಥನೆಯು ಆಧಾರರಹಿತವಾಗಿದೆ ಎಂದು ಅದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.