ADVERTISEMENT

ಕೋವಿಡ್‌–19 : ಅಮೆರಿಕಾದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 10:20 IST
Last Updated 18 ಮಾರ್ಚ್ 2020, 10:20 IST
   

ಬೆಂಗಳೂರು: ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆಯು ಅಮೆರಿಕಾದಲ್ಲಿ 100ರ ಗಡಿಯನ್ನು ದಾಟಿದೆ. ರೋಗವು ಅಲ್ಲಿನ 50 ರಾಜ್ಯಗಳಿಗೆ ಹರಡಿದ್ದು, ಸೋಂಕಿತರ ಸಂಖ್ಯೆ 6500ಕ್ಕೆ ಏರಿದೆ.

ಕೊರೊನಾ ವೈರಸ್ ಸೋಂಕಿಗೆ ಇಂದು ಹೊಸದಾಗಿ ಅಮೆರಿಕಾದಲ್ಲಿ 7 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆಯು 116ಕ್ಕೆ ಏರಿಕೆಯಾಗಿದೆ. ಅಮೆರಿಕಾದಾದ್ಯಂತ ಇಂದು 113 ಹೊಸ ಕೊರೊನಾ ಪ್ರಕರಣ ದಾಖಲಾಗಿವೆ.

ವಿಶ್ವದಾದ್ಯಂತ ಇಲ್ಲಿರವರೆಗೆ 1,98,741 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, 7,989 ಜನರು ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. 82,779 ಜನರು ಕೊರೊನಾ ವೈರಸ್ ರೋಗದಿಂದ ಗುಣಮುಖರಾಗಿದ್ದಾರೆ.

ADVERTISEMENT

ಭಾರತದಲ್ಲಿ ಇಲ್ಲಿಯವರೆಗೆ 152 ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಡಪಟ್ಟಿದೆ. ಒಟ್ಟು ಮೂರು ಜನರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.