ADVERTISEMENT

ಇರಾಕ್‌ ಸೇನೆ-ಕುರ್ದಿಶ್‌ ಪ್ರತ್ಯೇಕವಾದಿಗಳ ಘರ್ಷಣೆ: ಕನಿಷ್ಠ 3 ಸಾವಿರ ಮಂದಿ ಪಲಾಯನ

ಏಜೆನ್ಸೀಸ್
Published 3 ಮೇ 2022, 13:23 IST
Last Updated 3 ಮೇ 2022, 13:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗ್ದಾದ್‌: ಇರಾಕ್‌ ಸೇನೆ ಮತ್ತು ಉಗ್ರರ ನಂಟು ಹೊಂದಿರುವ ಕುರ್ದಿಶ್‌ ಪ್ರತ್ಯೇಕವಾದಿ ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆದ ಬೆನ್ನಲ್ಲೇ ಕನಿಷ್ಠ ಮೂರು ಸಾವಿರ ಮಂದಿ ಉತ್ತರ ಇರಾಕ್‌ ಅನ್ನು ತೊರೆದಿದ್ದಾರೆ ಎಂದುಮಿಲಿಟರಿ ಮತ್ತು ಸ್ಥಳೀಯ ಇರಾಕಿ ಕುರ್ದಿಷ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿಂಜಾರ್‌ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ತೊರೆದಿರುವ ಮಂದಿ, ಅರೆ ಸ್ವಾಯತ್ತ ಕುರ್ದಿಶ್‌ ಪ್ರದೇಶದತ್ತ ಪಲಾಯನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಟರ್ಕಿಯ ಬಂಡುಕೋರ ಗುಂಪಾದ ಕುರ್ದಿಸ್ತಾನ್‌ ವರ್ಕರ್ಸ್‌ ಪಾರ್ಟಿಯ ವೈಬಿಎಸ್‌ ಹಾಗೂ ಇರಾಕ್‌ನ ಸೇನೆಯೊಂದಿಗೆ ಘರ್ಷಣೆ ಸಂಭವಿಸಿತು.

ADVERTISEMENT

ವೈಬಿಎಸ್‌ ಪಡೆಗಳು ನಿರ್ಮಿಸಿದ್ದ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲು ಇರಾಕ್‌ ಸೇನೆ ಹೋದಾಗ ಈ ಹಿಂಸಾಚಾರ ಭುಗಿಲೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.