ADVERTISEMENT

ಬ್ರಿಟನ್‌ನಲ್ಲಿ ‌ಹಿಮಗಟ್ಟಿದ್ದ ಸರೋವರಕ್ಕೆ ಬಿದ್ದು ಮೂರು ಮಕ್ಕಳ ಸಾವು

ರಾಯಿಟರ್ಸ್
Published 12 ಡಿಸೆಂಬರ್ 2022, 14:28 IST
Last Updated 12 ಡಿಸೆಂಬರ್ 2022, 14:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌:ಮಧ್ಯಇಂಗ್ಲೆಂಡ್‌ನಲ್ಲಿ ಹಿಮಗಟ್ಟಿದ್ದ ಸರೋವರಕ್ಕೆ ಬಿದ್ದು ಮೂವರು ಬಾಲಕರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೃತರ ವಯಸ್ಸು 11,10 ಮತ್ತು 8 ವರ್ಷ. ಭಾನುವಾರ ಅವರ ಮೃತ ದೇಹವನ್ನು ಸೊಲಿಹಲ್‌ನ ಸರೋವರದಿಂದ ಹೊರತೆಗೆಯಲಾಗಿದೆ. 6 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಅರಗಿಸಿಕೊಳ್ಳಲಾಗದ ಸುದ್ದಿಯಿದು. ದೇವರು ಅವರಿಗೆ ನೋವು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಧಾನಿ ರಿಷಿ ಸುನಕ್‌ ಕಚೇರಿ ವಕ್ತಾರರು ಹೇಳಿದ್ದಾರೆ.

ADVERTISEMENT

ಬಾಲಕರ ಸಾವು ವಿವರಿಸಲು ಸಾಧ್ಯವಿಲ್ಲದ ದುರಂತ. ಚಳಿಗಾಲದಲ್ಲಿ ತೆರೆದ ನೀರಿನ ಮೂಲಗಳ ಅಪಾಯಕ್ಕೆ ಈ ಘಟನೆ ಸಾಕ್ಷಿ. ಬೇರೆ ಮಕ್ಕಳು ಸಿಲುಕಿರುವ ಶಂಕೆಯಲ್ಲಿ ಸಂಪೂರ್ಣ ಸರೋವರದಲ್ಲಿ ಹುಡುಕಾಟ ನಡೆಸಲಾಗಿದೆ ಎಂದು ಸ್ಥಳೀಯ ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣೆ ಅಧಿಕಾರಿಗಳು ಹೇಳಿದ್ದಾರೆ.

ಬಾಲಕರನ್ನು ರಕ್ಷಿಸುವ ವೇಳೆ ಸಿಬ್ಬಂದಿಗೆ ಆರೋಗ್ಯ ಏರುಪೇರಾಗಿದ್ದು, ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಕ್ಕಳನ್ನು ರಕ್ಷಿಸಲು ಸಿಬ್ಬಂದಿ ನೇರವಾಗಿ ಹಿಮವನ್ನು ಒಡೆಯಲು ಯತ್ನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೃತರೆಲ್ಲರು ಸಂಬಂಧಿಕರೇ ಎಂಬ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.