ADVERTISEMENT

ಕಠ್ಮಂಡು | ಮಾದಕ ವಸ್ತು ಸಾಗಣೆ: ಮೂವರು ಭಾರತೀಯರ ಸೆರೆ

ನೇಪಾಳ ಪೊಲೀಸರ ಕಾರ್ಯಾಚರಣೆ

ಪಿಟಿಐ
Published 5 ಮಾರ್ಚ್ 2025, 12:58 IST
Last Updated 5 ಮಾರ್ಚ್ 2025, 12:58 IST
<div class="paragraphs"><p>ಮಾದಕ ವಸ್ತು</p></div>

ಮಾದಕ ವಸ್ತು

   

(ಐಸ್ಟೋಕ್ ಚಿತ್ರ)

ಕಠ್ಮಂಡು: ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ದಕ್ಷಿಣ ನೇಪಾಳದಲ್ಲಿ ಮೂವರು ಭಾರತೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಿಹಾರ ಮೂಲದ ಗೌತಮ್ ಕುಶ್ವಾಹ(35), ರಂಜನ್ ಕುಮಾರ್ ಸಿಂಗ್ (30) ಮತ್ತು ಸಂಜೀವ್ ಕುಮಾರ್ ರಾಮ್(40) ಬಂಧಿತರು. 

ಜಿಟ್ಪುರ್ ಸಿಮಾರಾ ಪಾಲಿಕೆ ಪ್ರದೇಶದ ಹೋಟೆಲ್‌ವೊಂದರ ಮೇಲೆ ದಾಳಿ ಮಾಡಿದಾಗ  170 ಗ್ರಾಂ ಬ್ರೌನ್‌ ಶುಗರ್‌ ಸಮೇತ ಸಿಕ್ಕಿಬಿದ್ದಿದ್ದಾರೆ. ಮೂವರನ್ನೂ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.