ADVERTISEMENT

ಚೀನಾ: ಕಟ್ಟಡವೊಂದರಲ್ಲಿ ಸಿಲಿಂಡರ್‌ ಸ್ಫೋಟ, 3 ಸಾವು

ಪಿಟಿಐ
Published 7 ಜನವರಿ 2022, 16:22 IST
Last Updated 7 ಜನವರಿ 2022, 16:22 IST
ಚೀನಾದ ಚಾಂಗ್‌ಕಿಂಗ್‌ನ ವುಲಾಂಗ್ ಜಿಲ್ಲೆಯಲ್ಲಿ ಕ್ಯಾಂಟೀನ್ ಕಟ್ಟಡ ಸ್ಫೋಟಗೊಂಡು  ಕುಸಿದು ಬಿದ್ದ ಅವಶೇಷಗಳಡಿ ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ರಾಯಿಟರ್ಸ್‌
ಚೀನಾದ ಚಾಂಗ್‌ಕಿಂಗ್‌ನ ವುಲಾಂಗ್ ಜಿಲ್ಲೆಯಲ್ಲಿ ಕ್ಯಾಂಟೀನ್ ಕಟ್ಟಡ ಸ್ಫೋಟಗೊಂಡು  ಕುಸಿದು ಬಿದ್ದ ಅವಶೇಷಗಳಡಿ ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ರಾಯಿಟರ್ಸ್‌   

ಬೀಜಿಂಗ್‌:ನೈಋತ್ಯ ಚೀನಾದ ಕಚೇರಿಯೊಂದರಲ್ಲಿ ಶುಕ್ರವಾರ ಅನಿಲ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡು ಕಟ್ಟಡವೊಂದು ಕುಸಿದ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು14 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ.

ವುಲಾಂಗ್‌ ಜಿಲ್ಲೆಯ ಚೋಂಗ್‌ಕಿಂಗ್‌ ನಗರಸಭೆಯ ಉಪ ಜಿಲ್ಲಾ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ. ಇದರಿಂದ ಅಲ್ಲಿಯ 27 ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ.

ಅವಶೇಷಗಳಡಿ ಸಿಲುಕಿದ್ದ 13 ಜನರನ್ನು ಹೊರಕ್ಕೆ ಕರೆತರಲಾಗಿದೆ. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ವೇಳೆ ಮೂವರು ಮೃತಪಟ್ಟಿದ್ದರು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.