ADVERTISEMENT

ಉಕ್ರೇನ್‌: ಎರಡು ತರಬೇತಿ ವಿಮಾನಗಳ ನಡುವೆ ಡಿಕ್ಕಿ, ಮೂವರು ಪೈಲಟ್‌ಗಳ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2023, 2:39 IST
Last Updated 27 ಆಗಸ್ಟ್ 2023, 2:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್: ಉಕ್ರೇನ್‌ನಲ್ಲಿ ಎರಡು ತರಬೇತಿ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೀವ್‌ನ ಪಶ್ಚಿಮಕ್ಕೆ ಸುಮಾರು 140 ಕಿ.ಮೀ ದೂರದಲ್ಲಿರುವ ಝೈಟೊಮಿರ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಯುದ್ಧ ಕಾರ್ಯಾಚರಣೆ ನಿಮಿತ್ತ ಕರ್ತವ್ಯ ನಿರ್ವಹಿಸುತ್ತಿರುವಾಗ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಅವಘಡದಲ್ಲಿ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ವಾಯುಪಡೆ ಮಾಹಿತಿ ನೀಡಿದೆ.

ಸೇನಾ ಸಿಬ್ಬಂದಿ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮೃತರ ಕುಟುಂಬಗಳಿಗೆ ಉಕ್ರೇನ್ ವಾಯುಪಡೆ ಸಂತಾಪ ವ್ಯಕ್ತಪಡಿಸಿದೆ.

ADVERTISEMENT

ರಷ್ಯಾದ ಪಡೆಗಳು ಶನಿವಾರ ಈಶಾನ್ಯ ಉಕ್ರೇನ್‌ನ ಪ್ರಮುಖ ಮುಂಚೂಣಿ ಪ್ರದೇಶವಾದ ಪೊಡೊಲಿಯಲ್ಲಿನ ಕೆಫೆ ಮೇಲೆ ಶೆಲ್‌ ದಾಳಿ ನಡೆಸಿದ್ದರಿಂದ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.

ಕುಪಿಯಾನ್ಸ್ಕ್ ಉಪನಗರದ ಬಳಿ ಶೆಲ್ ದಾಳಿ ನಡೆದಿದೆ. ಈ ತಿಂಗಳ ಆರಂಭದಲ್ಲಿ ಈ ಪ್ರದೇಶದಲ್ಲಿ ಆರಂಭವಾದ ಭೀಕರ ಕದನವು ರಷ್ಯಾ ಮತ್ತೊಮ್ಮೆ ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವ ಆತಂಕವನ್ನು ಹೆಚ್ಚಿಸಿದೆ ಎಂದು ಬ್ರಿಟನ್‌ನ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.