ADVERTISEMENT

ಸುಂಟರಗಾಳಿ ಅಬ್ಬರ: 4 ಮಂದಿ ಸಾವು, ಒಕ್ಲಾಮಾದಲ್ಲಿ ತುರ್ತು ಪರಿಸ್ಥಿತಿ

ಏಜೆನ್ಸೀಸ್
Published 29 ಏಪ್ರಿಲ್ 2024, 12:53 IST
Last Updated 29 ಏಪ್ರಿಲ್ 2024, 12:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸಲ್ಫರ್ (ಅಮೆರಿಕ): ಸುಂಟರಗಾಳಿಯ ಅಬ್ಬರಕ್ಕೆ ಒಕ್ಲಾಮಾದಲ್ಲಿ ಹಲವು ಕಟ್ಟಡಗಳು ಧರೆಗುರುಳಿದ್ದು, 4 ಮಂದಿ ಮೃತಪಟ್ಟಿದ್ದಾರೆ.

ಒಕ್ಲಾಮಾದ 12 ಕೌಂಟಿಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಕನ್ಸಾಸ್, ಮಿಸ್ಸೌರಿ, ಅರ್ಕಾನ್ಸಾಸ್‌ ಮತ್ತು ಟೆಕ್ಸಾಸ್‌ ಮತ್ತು ಇತರ ನಗರಗಳಲ್ಲಿಯೂ ಪ್ರವಾಹ ಸಂಭವಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಲಾಗಿದೆ. 

ADVERTISEMENT

‘ಸುಂಟರಗಾಳಿ ಆರಂಭವಾದ ಬಳಿಕ ವಿದ್ಯುತ್‌ ಕಡಿತ ಉಂಟಾಗಿದ್ದು ಸುಮಾರು 30 ಸಾವಿರ ಜನರು ಕತ್ತಲಲ್ಲಿದ್ದಾರೆ. ಸಲ್ಫರ್‌ ನಗರದಲ್ಲಿ ವ್ಯಾಪಾಕ ಹಾನಿ ಸಂಭವಿಸಿದ್ದು, ‌30 ಜನ ಗಾಯಗೊಂಡಿದ್ದಾರೆ’ ಎಂದು ರಾಜ್ಯಪಾಲ ಕೆವಿನ್ ಸ್ಟಿಟ್‌ ಭಾನುವಾರ ತಿಳಿಸಿದ್ದಾರೆ.

‘ಶನಿವಾರ ಹೋಲ್ಡೆನ್‌ವಿಲ್ಲೆಯಲ್ಲಿ ಕಾಣಿಸಿಕೊಂಡ ಸುಂಟರಗಾಳಿಯಿಂದಾಗಿ ಇಬ್ಬರು ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ’ ಎಂದು ಹ್ಯೂಸ್‌ ಕೌಂಟಿ ಆರೋಗ್ಯ ತುರ್ತು ಸೇವಾ ವಿಭಾಗವು ಭಾನುವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.