
ಕೀರ್ತಿದಾ ಮೆಕಾನಿ
ಕೃಪೆ: @kirtidamekani
ಸಿಂಗಾಪುರ: ಕರ್ನಾಟಕದಿಂದ ಸಿಂಗಾಪುರಕ್ಕೆ ಬಂದು 'ವೃಕ್ಷಮಾತೆ' ಎನಿಸಿದ್ದ ಕೀರ್ತಿದಾ ಮೆಕಾನಿ ಅವರು ಜನವರಿ 19ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಪರಿಸರ ಸುಸ್ಥಿರತೆ, ಸಮಾಜ ಸೇವೆ ಹಾಗೂ ಸಾಂಸ್ಕೃತಿಕ ಪರಂಪರೆ ರಕ್ಷಣೆಯ ಅತ್ಯಂತ ಪ್ರಭಾವಶಾಲಿ ಚಾಂಪಿಯನ್ ಎನಿಸಿದ್ದ ಮೆಕಾನಿ ಅವರ ಅನನ್ಯ ಸೇವೆಯನ್ನು ಪರಿಗಣಿಸಿ, ಸಿಂಗಾಪುರ ಸರ್ಕಾರವು ರಾಷ್ಟ್ರಪತಿ ಪ್ರಶಸ್ತಿ ಹಾಗೂ ಹಾಲ್ ಆಫ್ ಫೇಮ್ ನೀಡಿ ಗೌರವಿಸಿತ್ತು.
ದ್ವೀಪ ರಾಷ್ಟ್ರದಲ್ಲಿನ ಹಸಿರು ತಾಣಗಳು, ಸಮುದಾಯ ಉದ್ಯಾನಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಹೆಗ್ಗುರುತುಗಳಲ್ಲಿ ಮೆಕಾನಿ ಅವರ ಕೊಡುಗೆಗಳನ್ನು ಕಾಣಬಹುದಾಗಿದೆ ಎಂದು 'ತಬ್ಲಾ' ಆನ್‌ಲೈನ್ ಟ್ಯಾಬ್ಲಾಯ್ಡ್ ವರದಿ ಮಾಡಿದೆ.
'ಟ್ರೀ ಲೇಡಿ' ಎಂದೇ ಖ್ಯಾತರಾಗಿದ್ದ ಮೆಕಾನಿ ಅವರ ನಿಧನವು, ಸಿಂಗಾಪುರದಲ್ಲಿ ಶೂನ್ಯ ಆವರಿಸುವಂತೆ ಮಾಡಿದೆ. ಅವರು, ಕಲೆ, ಪರಿಸರ ಹಾಗೂ ಸಮಾಜ ಸೇವೆ ಕ್ಷೇತ್ರಗಳಲ್ಲಿ ಕಳೆದ ಮೂರು ದಶಕಗಳಿಂದ ಅಪಾರ ಕೆಲಸ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.