ADVERTISEMENT

ಗಡೀಪಾರು ಆದೇಶ ತಡೆ ಉಲ್ಲಂಘನೆ: ಟ್ರಂಪ್ ಆಡಳಿತದ ವಿರುದ್ಧ ನ್ಯಾಯಾಂಗ ನಿಂದನೆ?

ರಾಯಿಟರ್ಸ್
Published 17 ಏಪ್ರಿಲ್ 2025, 3:03 IST
Last Updated 17 ಏಪ್ರಿಲ್ 2025, 3:03 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್ ಚಿತ್ರ

ವಾಷಿಂಗ್ಟನ್: ಯುದ್ಧಕಾಲದ ಕಾನೂನಿನಡಿ ವೆನಿಜುವೆಲದ ನಾಗರಿಕರನ್ನು ಗಡೀಪಾರು ಮಾಡಬಾರದು ಎನ್ನುವ ತನ್ನ ಆದೇಶವನ್ನು ಉಲ್ಲಂಘಿಸಿರುವುದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವನ್ನು ನ್ಯಾಯಾಂಗ ನಿಂದನೆಗೆ ಗುರಿಪಡಿಸಬಹುದು ಎಂದು ಅಮೆರಿಕದ ಫೆಡರಲ್ ನ್ಯಾಯಾಧೀಶರೊಬ್ಬರು ಹೇಳಿದ್ದಾರೆ.

ADVERTISEMENT

ವೆನಿಜುವೆಲಾ ಗ್ಯಾಂಗ್ ಸದಸ್ಯರೆಂದು ಆರೋಪಿಸಲಾದವರನ್ನು ಎಲ್ ಸಲ್ವಡರ್‌ಗೆ ಗಡೀಪಾರು ಮಾಡುವ ಆದೇಶಕ್ಕೆ ಮಾರ್ಚ್ 15ರಂದು ನೀಡಿದ ತಡೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ವಾಷಿಂಗ್ಟನ್‌ನ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಬೋಸ್‌ಬರ್ಗ್ ಹೇಳಿದ್ದಾರೆ.

ಬೋಸ್‌ಬರ್ಗ್ ಅವರು ಆದೇಶ ನೀಡುವ ವೇಳೆ, ವೆನಿಜುವೆಲ ನಾಗರಿಕರಿದ್ದ ಎರಡು ವಿಮಾನಗಳು ಅಮೆರಿಕದಿಂದ ಎಲ್ ಸಲ್ವಡರ್‌ಗೆ ಪ್ರಯಾಣಿಸುತ್ತಿತ್ತು. ಟೇಕಾಫ್ ಆಗಿರುವ ವಿಮಾನಗಳು ತಕ್ಷಣವೇ ಅಮೆರಿಕಕ್ಕೆ ಹಿಂದಿರುಗಬೇಕು ಎಂದು ಅವರು ಆದೇಶದಲ್ಲಿ ಹೇಳಿದ್ದರು. ಆದರೆ ಅದನ್ನು ಧಿಕ್ಕರಿಸಿದ್ದಕ್ಕಾಗಿ ಸರ್ಕಾರವನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಗುರಿಯಾಗಿಸಬಹುದು ಎಂದು ಅವರು ಹೇಳಿದ್ದಾರೆ.

‘ನ್ಯಾಯಾಲಯವು ಅಂತಹ ತೀರ್ಮಾನವನ್ನು (ನ್ಯಾಯಾಂಗ ನಿಂದನೆ) ಲಘುವಾಗಿ ಅಥವಾ ಆತುರದಿಂದ ತೆಗೆದುಕೊಳ್ಳುವುದಿಲ್ಲ. ಪ್ರತಿವಾದಿಗಳಿಗೆ ತಮ್ಮ ಕ್ರಿಯೆಗಳನ್ನು ಸರಿಪಡಿಸಲು ಅಥವಾ ವಿವರಿಸಲು ಸಾಕಷ್ಟು ಅವಕಾಶವನ್ನು ನೀಡಿದೆ. ಆದರೆ ಅವರ ಯಾವುದೇ ಪ್ರತಿಕ್ರಿಯೆಗಳು ತೃಪ್ತಿಕರವಾಗಿಲ್ಲ’ ಎಂದು ಎಂದು ಬೋಸ್‌ಬರ್ಗ್ ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೋರಿ ಟ್ರಂಪ್ ಆಡಳಿತವನ್ನು ಸಂಪರ್ಕಿಸಲಾಯಿತಾದರೂ ಪ್ರಯೋಜನವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.