
ವಾಷಿಂಗ್ಟನ್: ಏಪ್ರಿಲ್‌ನಲ್ಲಿ ಚೀನಾಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಷಿ ಜಿನ್‌ಪಿಂಗ್ ನೀಡಿದ್ದ ಆಹ್ವಾನ ಸ್ವೀಕರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
‘ಅವರ ಆಹ್ವಾನಕ್ಕೆ ಪ್ರತಿಯಾಗಿ, ಮುಂದಿನ ವರ್ಷದ ಕೊನೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡುವಂತೆ ಅವರನ್ನೂ ಆಹ್ವಾನಿಸಿದ್ದೇನೆ’ ಎಂದೂ ಟ್ರಂಪ್ ಹೇಳಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಇಬ್ಬರೂ ನಾಯಕರು ಖಾಸಗಿಯಾಗಿ ಭೇಟಿಯಾಗಿ ಸುಮಾರು ಒಂದು ತಿಂಗಳು ಕಳೆದ ನಂತರ ಫೋನ್ ಮೂಲಕ ಮಾತನಾಡಿದ್ದಾರೆ. ಆನಂತರ ಟ್ರಂಪ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಉಕ್ರೇನ್ ಯುದ್ಧದ ಬಗ್ಗೆಯಷ್ಟೇ ಅಲ್ಲದೆ ಫೆಂಟನಿಲ್ ಮತ್ತು ಅಮೆರಿಕ ಸೋಯಾಬಿನ್ ಖರೀದಿಯ ಕುರಿತೂ ದೂರವಾಣಿ ಮೂಲಕ ಚರ್ಚಿಸಿರುವುದಾಗಿ ಅವರು ಹೇಳಿದ್ದಾರೆ.
‘ಚೀನಾ ಜೊತೆಗಿನ ನಮ್ಮ ಸಂಬಂಧ ಗಟ್ಟಿಯಾಗಿದೆ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.