ವಾಷಿಂಗ್ಟನ್: ರಾಷ್ಟ್ರೀಯ ಭದ್ರತಾ ಕಾಳಜಿ ದೃಷ್ಟಿಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಪ್ರಯಾಣ ನಿಷೇಧದ ಹೊಸ ನಿಯಮವನ್ನು ಸೋಮವಾರದಿಂದ ಜಾರಿಗೊಳಿಸಿದ್ದಾರೆ.
ಈ ನಿಯಮದ ಪ್ರಕಾರ, ಅಫ್ಗಾನಿಸ್ತಾನ, ಮ್ಯಾನ್ಮಾರ್, ಚಾಡ್, ಕಾಂಗೊ ಗಣರಾಜ್ಯ, ಈಕ್ವಟೋರಿಯಲ್ ಗಿನಿ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮನ್ ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಅಮೆರಿಕದ ಹೊರಗೆ ಇರುವ ಮತ್ತು ಮಾನ್ಯತಾ ವೀಸಾ ಹೊಂದಿಲ್ಲದ ಬುರುಂಡಿ, ಕ್ಯೂಬಾ, ಲಾವೋಸ್, ಸಿಯೆರಾ ಲಿಯೋನ್, ಟೋಗೊ, ತುರ್ಕಮೆನಿಸ್ತಾನ ಮತ್ತು ವೆನೆಜುವೆಲಾ ಸೇರಿದಂತೆ ಏಳು ದೇಶಗಳ ನಾಗರಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿದೆ.
ಈ ನಿಯಮವು ಯಾವಾಗ ಕೊನೆಗೊಳ್ಳುತ್ತದೆ ಎಂದು ತಿಳಿದುಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.