ADVERTISEMENT

‘ಅಮೆರಿಕ ಡಾಲರ್‌ ಮೇಲೆ ‘ಬ್ರಿಕ್ಸ್’ ದಾಳಿ’

ಪಿಟಿಐ
Published 15 ಅಕ್ಟೋಬರ್ 2025, 16:45 IST
Last Updated 15 ಅಕ್ಟೋಬರ್ 2025, 16:45 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ನ್ಯೂಯಾರ್ಕ್‌: ‘ಬ್ರಿಕ್ಸ್‌’ ರಾಷ್ಟ್ರಗಳು ಡಾಲರ್‌ ಮೇಲೆ ದಾಳಿ ಮಾಡುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಆರೋಪಿಸಿದ್ದಾರೆ.

ಅಮೆರಿಕ ನೀತಿಗಳ ವಿರುದ್ಧವಾಗಿರುವ ‘ಬ್ರಿಕ್ಸ್‌’ ರಾಷ್ಟ್ರಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಅರ್ಜೆಂಟೀನಾ ಅಧ್ಯಕ್ಷ ಜಾವಿಯರ್‌ ಮಿಲೈ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಟ್ರಂಪ್, ‘ನಾನು ಡಾಲರ್ ಜೊತೆಗೆ ನಿಲ್ಲುತ್ತೇನೆ. ಡಾಲರ್‌ನಲ್ಲಿ ವಹಿವಾಟು ನಡೆಸಲು ಬಯಸುವವರಿಗೆ ಹಲವು ಉಪಯೋಗವಾಗಲಿದೆ. ಇತರರಿಗೆ ಆ ಅವಕಾಶ ಸಿಗಲ್ಲ’ ಎಂದು ಹೇಳಿದರು..

ADVERTISEMENT

‘ಬ್ರಿಕ್ಸ್‌ನ ಭಾಗವಾಗಲು ಬಯಸುವವ‌ವರ ಬಗ್ಗೆ ಆಕ್ಷೇಪವಿಲ್ಲ. ಆದರೆ ಅವರಿಗೆ ನಾವು ಸುಂಕವನ್ನು ವಿಧಿಸುವುದಾಗಿ ಹೇಳಿದ್ದೆ. ಎಲ್ಲರೂ ಬ್ರಿಕ್ಸ್‌ನಿಂದ ಹೊರಬಂದರು’ ಎಂದು ಹೇಳಿದರು.

ಏಕಪಕ್ಷೀಯ ಸುಂಕ ಮತ್ತು ಸುಂಕ ರಹಿತ ಕ್ರಮಗಳಿಂದಾಗಿ ಜಾಗತಿಕ ವಹಿವಾಟಿನ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ‘ಬ್ರಿಕ್ಸ್‌’ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.