ವಾಷಿಂಗ್ಟನ್: ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೆರಿಕದ ಏಜನ್ಸಿಯ (ಯುಎಸ್ ಏಡ್) ಏಷ್ಯಾ ಬ್ಯೂರೊ ಮುಖ್ಯಸ್ಥರಾಗಿ ಭಾರತ ಮೂಲದ ಅಮೆರಿಕನ್ ವಕೀಲರೊಬ್ಬರನ್ನು ನೇಮಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತಿಸುತ್ತಿದ್ದಾರೆ ಎಂದು ಶ್ವೇತಭವನ ಮೂಲಗಳು ತಿಳಿಸಿವೆ.
ಇದು ನಿಜವಾದರೆ ಮೆರಿಲ್ಯಾಂಡ್ ನಿವಾಸಿ ಸುಘೋಷ್ ಸ್ಟ್ರಿಕ್ಲೆಟ್ ಅವರು ಯುಎಸ್ ಎಡ್‌ನ ಏಷ್ಯಾ ಬ್ಯೂರೊದ ಸಹಾಯಕ ಆಡಳಿತಗಾರರಾಗಿ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಘೋಷ್ ಅವರು ರಾಷ್ಟ್ರೀಯ ಭದ್ರತೆ ಕಾನೂನು ಹಾಗೂ ವಿದೇಶಾಂಗ ವ್ಯವಹಾರಗಳನ್ನು ಕುರಿತು 25 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.