ADVERTISEMENT

ಮಿಷಿಗನ್‌ ಪ್ರಾಥಮಿಕ ಸುತ್ತಿನಲ್ಲಿ ಡೊನಾಲ್ಡ್ ಟ್ರಂಪ್‌ ಗೆಲುವು

ಪಿಟಿಐ
Published 28 ಫೆಬ್ರುವರಿ 2024, 14:29 IST
Last Updated 28 ಫೆಬ್ರುವರಿ 2024, 14:29 IST
<div class="paragraphs"><p> ಡೊನಾಲ್ಡ್ ಟ್ರಂಪ್‌</p></div>

ಡೊನಾಲ್ಡ್ ಟ್ರಂಪ್‌

   

- ರಾಯಿಟರ್ಸ್ ಚಿತ್ರ

ವಾಷಿಂಗ್ಟನ್: ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ರಮವಾಗಿ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಉಮೇದುವಾರಿಕೆಗೆ ಮಿಷಿಗನ್ ಪ್ರಾಥಮಿಕ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ. ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಇವರಿಬ್ಬರೂ ಮತ್ತೆ ಎದುರಾಳಿಗಳಾಗುವ ಸಾಧ್ಯತೆ ಇದೆ.

ADVERTISEMENT

ಟ್ರಂಪ್ ಅವರು ತಮ್ಮ ಪ್ರಮುಖ ಎದುರಾಳಿ, ಭಾರತ ಮೂಲದ ಅಮೆರಿಕನ್ ಮಹಿಳೆ ನಿಕ್ಕಿ ಹ್ಯಾಲೆ ಅವರನ್ನು ಸುಲಭವಾಗಿ ಮಣಿಸಿದರು. ಆ ಮೂಲಕ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುವತ್ತ ಒಂದು ಹೆಜ್ಜೆ ಮುಂದೆ ಬಂದಂತಾಗಿದೆ.

ಡೆಮಾಕ್ರಟಿಕ್ ಪಕ್ಷದ ಮಿಷಿಗನ್ ಪ್ರಾಥಮಿಕ ಸುತ್ತಿನ ಪ್ರಮುಖ ಅಂಶವೆಂದರೆ, ಶೇಕಡ 14ಕ್ಕಿಂತ ಹೆಚ್ಚಿನ ಡೆಮಾಕ್ರಟಿಕ್ ಮತದಾರರು ಬೈಡನ್ ಅವರ ವಿರುದ್ಧ ತಮ್ಮ ನಿಲುವು ದಾಖಲಿಸಿದ್ದಾರೆ. ಬೈಡನ್ ಅವರು ಇಸ್ರೇಲ್–ಪ್ಯಾಲೆಸ್ಟೀನ್ ಯುದ್ಧವನ್ನು ನಿರ್ವಹಿಸಿದ ರೀತಿಯನ್ನು ವಿರೋಧಿಸುವುದರ ಭಾಗವಾಗಿ ಅವರು ಹೀಗೆ ಮಾಡಿದ್ದಾರೆ. ಮಿಷಿಗನ್‌ನಲ್ಲಿ ಮುಸ್ಲಿಂ ಸಮುದಾಯದವರ ಸಂಖ್ಯೆಯು ಗಮನಾರ್ಹವಾಗಿದೆ.

21 ರಾಜ್ಯಗಳಲ್ಲಿ ಪ್ರಾಥಮಿಕ ಸುತ್ತಿನ ಚುನಾವಣೆಯು ಮುಂದಿನ ಮಂಗಳವಾರ ನಡೆಯಲಿದೆ. ಈಗಿನ ಪರಿಸ್ಥಿತಿಯ ಪ್ರಕಾರ, ಟ್ರಂಪ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಆ ರೀತಿ ಆದರೆ, 2024ರ ಚುನಾವಣೆಯಲ್ಲಿ ಟ್ರಂಪ್ ಮತ್ತು ಬೈಡನ್ ಅವರೇ ಮತ್ತೆ ಎದುರಾಳಿಗಳಾಗಲಿದ್ದಾರೆ. 2020ರ ಚುನಾವಣೆಯಲ್ಲಿ ಕೂಡ ಇವರಿಬ್ಬರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.