ADVERTISEMENT

‘ಅನಾನಿಮಸ್‌’ ಎನ್ನಲು ಪರದಾಡಿದ ಡೊನಾಲ್ಡ್‌ ಟ್ರಂಪ್‌

ಪಿಟಿಐ
Published 9 ಸೆಪ್ಟೆಂಬರ್ 2018, 13:10 IST
Last Updated 9 ಸೆಪ್ಟೆಂಬರ್ 2018, 13:10 IST
   

ವಾಷಿಂಗ್ಟನ್‌:ಅಮೆರಿಕದ ಅಧ್ಯಕ್ಷಡೊನಾಲ್ಡ್‌ ಟ್ರಂಪ್‌ ಅನಾನಿಮಸ್‌ (anonymous) ಪದವನ್ನು ಉಚ್ಚರಿಸಲು ಪ್ರಯಾಸ ಪಟ್ಟ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನ್ಯೂಯಾರ್ಕ್ ಟೈಮ್ಸ್‌ ಸಂಪಾದಕೀಯ ಪುಟದಲ್ಲಿ ಟ್ರಂಪ್‌ ನೇತೃತ್ವದ ಸರ್ಕಾರದ ವಿರುದ್ಧ ಲೇಖನ ಪ್ರಕಟವಾಗಿತ್ತು.ಆದರೆ, ಬರೆದವರ ಹೆಸರನ್ನು ಪತ್ರಿಕೆ ಹಾಕಿರಲಿಲ್ಲ.ಇದರ ವಿರುದ್ಧಮೊಂಟಾನಾದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಟ್ರಂಪ್‌ ಹರಿಹಾಯ್ದಿದ್ದರು.

ಈ ವೇಳೆ ಅವರುಅನಾನಿಮಸ್‌ಪದವನ್ನು ಉಚ್ಚರಿಸಲು ಹೆಣಗಾಡಿದರು. ಈ ವಿಡಿಯೊ ವೈರಲ್‌ ಆಗಿದ್ದು , ಇದನ್ನು ನೋಡಿರುವ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.