ADVERTISEMENT

ಅಮೆರಿಕ: ಅನುದಾನ ರದ್ದುಗೊಳಿಸಿದ್ದ ಟ್ರಂಪ್‌ ನಿರ್ಧಾರಕ್ಕೆ ನ್ಯಾಯಾಲಯ ತಡೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 15:26 IST
Last Updated 26 ಜುಲೈ 2025, 15:26 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌ </p></div>

ಡೊನಾಲ್ಡ್‌ ಟ್ರಂಪ್‌

   

ಪಿಟಿಐ ಚಿತ್ರ

ವಾಷಿಂಗ್ಟನ್‌: ಇಲ್ಲಿನ ‘ಆಥರ್ಸ್‌ ಗಿಲ್ಡ್‌’ (ಲೇಖಕರ ಒಕ್ಕೂಟ)ಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಾಮೂಹಿಕವಾಗಿ ಅನುದಾನ ರದ್ದುಗೊಳಿಸಿದ್ದ ಕ್ರಮಕ್ಕೆ ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಲಯವು ಮಧ್ಯಂತರ ತಡೆ ನೀಡಿದೆ.

ADVERTISEMENT

ಸದಸ್ಯರಿಗೆ ನೀಡಿದ್ದ ಅನುದಾನ ರದ್ದುಗೊಳಿಸಿದ ನಿರ್ಧಾರಕ್ಕೆ ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಧೀಶ ಕೊಲ್ಲೆನ್‌ ಮ್ಯಾಕ್‌ಮೊಹನ್‌ ತಡೆ ನೀಡಿದರು. ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೂ ಯಾವುದೇ ಅನುದಾನವನ್ನು ತಡೆಯಬಾರದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.