ADVERTISEMENT

ಇರಾನ್ ಮೇಲೆ ದಾಳಿ: ಟ್ರಂಪ್ ವಾಗ್ದಂಡನೆ ಯತ್ನಕ್ಕೆ ಅಮೆರಿಕ ಸಂಸತ್ತಿನಲ್ಲಿ ಸೋಲು

ಪಿಟಿಐ
Published 25 ಜೂನ್ 2025, 4:19 IST
Last Updated 25 ಜೂನ್ 2025, 4:19 IST
<div class="paragraphs"><p>ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್: ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವ ಆರೋಪದ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಗ್ದಂಡನೆಗೆ ಗುರಿಪಡಿಸುವ ಪ್ರಯತ್ನಕ್ಕೆ ಅಮೆರಿಕ ಸಂಸತ್ತಿನಲ್ಲಿ ಸೋಲಾಗಿದೆ.

ADVERTISEMENT

ಸಂತ್ತಿನ ಅನುಮೋದನೆ ಪಡೆಯದೆ ಇರಾನ್‌ನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿ, ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ವಾಗ್ದಂಡನೆ ನೋಟಿಸ್ ನೀಡಲಾಗಿತ್ತು.

ಡೆಮಾಕ್ರಟ್ ಪಕ್ಷದ ಟೆಕ್ಸಾಸ್‌ ಸಂಸ ಎ.ಐ ಗ್ರೀನ್ ನೀಡಿದ್ದ ವಾಗ್ದಂಡನೆ ನೋಟಿಸ್ ಬಗ್ಗೆ ಸಂಸತ್ತಿನಲ್ಲಿ ಹೃಸ್ವ ಚರ್ಚೆ ನಡೆಯಿತು. ಅವರದೇ ಪಕ್ಷದ ಸಂಸದರಿಂದಲೇ ಇದಕ್ಕೆ ಬೆಂಬಲ ಸಿಗಲಿಲ್ಲ. 344–79 ಬಹುಮದಿಂದ ವಾಗ್ದಂಡನೆ ಪ್ರಯತ್ನಕ್ಕೆ ಸೋಲಾಯಿತು.

‘ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಸಂತೋಷವಿಲ್ಲ. ಅಮೆರಿಕ ಸಂಸತ್ತಿಗೆ ತಿಳಿಸದೆ 30 ಕೋಟಿ ಮಂದಿಯನ್ನು ಯುದ್ಧಕ್ಕೆ ಕರೆದೊಯ್ಯುವ ಅಧಿಕಾರ ಯಾರಿಗೂ ಇಲ್ಲ’ ಎಂದು ಅವರು ಮತದಾನಕ್ಕೂ ಮುನ್ನ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.