ADVERTISEMENT

ಟ್ರಂಪ್‌, ಜಿನ್‌ಪಿಂಗ್ ಚರ್ಚೆ: ವ್ಯಾಪಾರ, ತೈವಾನ್‌, ಉಕ್ರೇನ್‌ ಕುರಿತು ಮಾತುಕತೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 19:52 IST
Last Updated 24 ನವೆಂಬರ್ 2025, 19:52 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಸೋಮವಾರ ದೂರವಾಣಿ ಮೂಲಕ ವ್ಯಾಪಾರ, ತೈವಾನ್‌ ಹಾಗೂ ಉಕ್ರೇನ್‌ ಕುರಿತು ಚರ್ಚಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ.

‘ಯುದ್ಧಾನಂತರ ಚೀನಾಕ್ಕೆ ತೈವಾನ್‌ ಸೇರ್ಪಡೆಗೊಳ್ಳಬೇಕು ಎನ್ನುವುದು ಅಂತರರಾಷ್ಟ್ರೀಯ ಆದೇಶದ ಪ್ರಮುಖ ಅಂಶವಾಗಿದೆ’ ಎಂದು ಷಿ ಅವರು ಟ್ರಂಪ್‌ ಅವರಿಗೆ ತಿಳಿಸಿದ್ದಾರೆಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ‘ಷಿನ್ಹುವಾ’ ವರದಿ ಮಾಡಿದೆ. 

‘ತೈವಾನ್‌ ತನ್ನ ಭೂಪ್ರದೇಶ ಎಂದು ಹೇಳಿಕೊಂಡು ಚೀನಾ ಅದರ ಮೇಲೆ ದಾಳಿ ನಡೆಸಿದರೆ, ಆಗ ಜಪಾನ್‌ ಸೇನೆಯು ಹಸ್ತಕ್ಷೇಪಕ್ಕೆ ಮುಂದಾಗಬಹುದು’ ಎಂದು ಜಪಾನ್‌ ಪ್ರಧಾನಿ ಸನೇ ತಕೈಚಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.