ನರೇಂದ್ರ ಮೋದಿ– ಡೊನಾಲ್ಡ್ ಟ್ರಂಪ್
–ಪಿಟಿಐ ಚಿತ್ರ
ನ್ಯೂಯಾರ್ಕ್: ‘ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧನಾತ್ಮಕ ಸಂಬಂಧ ಹೊಂದಿದ್ದು, ಆದಷ್ಟು ಬೇಗ ಇಬ್ಬರೂ ಕೂಡ ಭೇಟಿಯಾಗಲಿದ್ದಾರೆ’ ಎಂದು ಅಮೆರಿಕ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದರು.
‘ಮುಂದಿನ ಕ್ವಾಡ್ ಶೃಂಗಸಭೆಯ ಸಂಬಂಧ ಯೋಜನೆ ರೂಪಿಸಲಾಗುತ್ತಿದ್ದು, ಅದಕ್ಕೂ ಮುನ್ನವೇ ಭೇಟಿಯಾಗಬಹುದು’ ಎಂದು ಹೇಳಿದ್ದಾರೆ.
ಮುಂದಿನ ಕ್ವಾಡ್ ಶೃಂಗಸಭೆಯ ಆತಿಥ್ಯವನ್ನು ಭಾರತ ವಹಿಸಲಿದೆ. ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್ ಸದಸ್ಯ ರಾಷ್ಟ್ರಗಳಾಗಿವೆ. 2024ರಲ್ಲಿ ಅಮೆರಿಕದ ಡೆಲಾವೆರ್‌ನ ವಿಲ್ಮಿಂಗ್ಟನ್‌ನಲ್ಲಿ ಈ ಹಿಂದಿನ ಶೃಂಗಸಭೆ ನಡೆದಿತ್ತು.
‘ಸಭೆಯ ವಿಷಯು ಶೀಘ್ರದಲ್ಲಿಯೇ ಹೊರಬೀಳಲಿದೆ. ಅಧ್ಯಕ್ಷರ ಭೇಟಿ ಕುರಿತು ಯಾವುದೇ ಮಾಹಿತಿ ನೀಡುವುದಿಲ್ಲ. ಆದರೂ, ಪ್ರಧಾನಿ ನರೇಂದ್ರ ಮೋದಿ– ಅಧ್ಯಕ್ಷ ಟ್ರಂಪ್ ಆದಷ್ಟು ಬೇಗ ಭೇಟಿಯಾಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
‘ಇಬ್ಬರೂ ಕೂಡ ಧನಾತ್ಮಕವಾದ ಸಂಬಂಧ ಹೊಂದಿದ್ದಾರೆ. ಕ್ವಾಡ್ ಶೃಂಗಸಭೆಯು ಮಾಹಿತಿ ಸಿಕ್ಕಿದ್ದು, ಆ ನಿಟ್ಟಿನಲ್ಲಿ ನಾವು ಯೋಜನೆ ರೂಪಿಸುತ್ತಿದ್ದೇವೆ. ಅದಕ್ಕೂ ಮುನ್ನವೇ ಅಥವಾ ಮುಂದಿನ ವರ್ಷದ ಆರಂಭದಲ್ಲಿಯೇ ಇಬ್ಬರೂ ಭೇಟಿಯಾಗಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.