ವಾಷಿಂಗ್ಟನ್: ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿಸಾಂಪ್ರದಾಯಿಕ ನಿಲುವಿನ ಬ್ರೆಟ್ ಕವನಾಗ್ ಅವರನ್ನು ನೇಮಕಗೊಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಗರ್ಭಪಾತ ನಿಯಮ, ವಲಸಿಗರಿಗೆ ಬಂದೂಕು ನೀಡುವ ನೀತಿ ಸೇರಿದಂತೆ ಅನೇಕ ವಿಚಾರಗಳಲ್ಲಿ ನ್ಯಾಯಮೂರ್ತಿಗಳ ನಡುವೆ ವಿರೋಧಾಭಾಸಗಳಿದ್ದು, ಬ್ರೆಟ್ ನೇಮಕದಿಂದ ಸೈದ್ಧಾಂತಿಕವಾಗಿ ಸುಪ್ರೀಂಕೋರ್ಟ್ ಇಬ್ಭಾಗವಾಗಿದೆ.
ಭಾರತ ಮೂಲದ ಅಮುಲ್ ಥಾಪರ್ ಸೇರಿದಂತೆ ಸುಮಾರು 25 ಮಂದಿ ನ್ಯಾಯಮೂರ್ತಿಗಳ ನೇಮಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು, ಆದರೆ ಟ್ರಂಪ್ ಅವರು 53 ವರ್ಷದ ಬ್ರೆಟ್ ಅವರನ್ನು ನೇಮಕಗೊಳಿಸಿದ್ದಾರೆ.81 ವರ್ಷದ ನ್ಯಾಯಮೂರ್ತಿ ಆ್ಯಂಟೊನಿ ಕೆನ್ನೆಡಿ ನಿವೃತ್ತಿಯಾದ ಸ್ಥಾನಕ್ಕೆ ಇವರನ್ನು ನೇಮಕ ಮಾಡಲಾಗಿದೆ.
ಸಾಂಪ್ರದಾಯಿಕ ಸಿದ್ಧಾಂತದ ಜೊತೆ ಗುರುತಿಸಿಕೊಂಡಿರುವ ಬ್ರೆಟ್ ನೇಮಕ ಖಚಿತಗೊಳ್ಳುತ್ತಿದ್ದಂತೆಯೇ, ಡೆಮಾಕ್ರಟಿಕ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
‘ಸುಪ್ರೀಂಕೋರ್ಟ್‌ನಲ್ಲಿ ಸಾಂಪ್ರದಾಯಿಕ ನಿಲುವನ್ನು ಸರಿದೂಗಿಸುವ ನಿಟ್ಟಿನಲ್ಲಿ ಟ್ರಂಪ್ ಅವರು ಈ ನೇಮಕಾತಿ ಮಾಡಿದ್ದಾರೆ’ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.