ADVERTISEMENT

ದೇಶದ ಶಿಕ್ಷಣ ಇಲಾಖೆ ರದ್ದುಪಡಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಸಹಿ

ಪಿಟಿಐ
Published 21 ಮಾರ್ಚ್ 2025, 14:38 IST
Last Updated 21 ಮಾರ್ಚ್ 2025, 14:38 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ದೇಶದ ಶಿಕ್ಷಣ ಇಲಾಖೆಯನ್ನು ರದ್ದು ಮಾಡುವ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಹಿ ಹಾಕಿದ್ದಾರೆ. 

ಪ್ರಗತಿಪರ ಸಿದ್ಧಾಂತಗಳಿಂದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಕಲುಷಿತಗೊಂಡಿದ್ದು, ಅದು ನಿರುಪಯುಕ್ತ ಎಂದು ಟ್ರಂಪ್‌ ಟೀಕಿಸುತ್ತಿದ್ದರು. ಆದಾಗ್ಯೂ 1979ರಲ್ಲಿ ರಚಿತವಾದ ಈ ಇಲಾಖೆಯನ್ನು ಸಂಪುಟದ ಸಹಕಾರವಿಲ್ಲದೆ ರದ್ದು ಮಾಡಲು ಬಹುಶಃ ಸಾಧ್ಯವಿಲ್ಲ. ಈ ಇಲಾಖೆಯನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಕಾನೂನು ರೂಪಿಸುವುದಾಗಿ ಆಡಳಿತಾರೂಢ ರಿಪಬ್ಲಿಕನ್‌ ಸದಸ್ಯರು ಹೇಳುತ್ತಿದ್ದಾರೆ. ಆದರೆ ಡೆಮಾಕ್ರಟಿಕ್‌ ಸದಸ್ಯರು ಸರ್ಕಾರದ ಈ ನಡೆಯನ್ನು ವಿರೋಧಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT