ADVERTISEMENT

ಸಣ್ಣ ದೇಶಗಳಿಗೆ ಶೇ 10ಕ್ಕೂ ಅಧಿಕ ಸುಂಕ: ಡೊನಾಲ್ಡ್ ಟ್ರಂಪ್ 

ಏಜೆನ್ಸೀಸ್
Published 16 ಜುಲೈ 2025, 15:34 IST
Last Updated 16 ಜುಲೈ 2025, 15:34 IST
<div class="paragraphs"><p>ಡೊನಾಲ್ಡ್ ಟ್ರಂಪ್&nbsp;</p></div>

ಡೊನಾಲ್ಡ್ ಟ್ರಂಪ್ 

   

ವಾಷಿಂಗ್ಟನ್: ಆಫ್ರಿಕಾ ಮತ್ತು ಕೆರಿಬಿಯನ್ ರಾಷ್ಟ್ರಗಳು ಸೇರಿ ಸಣ್ಣ ದೇಶಗಳ ಮೇಲೆ ಶೇ 10ಕ್ಕೂ ಅಧಿಕ ಸುಂಕ ವಿಧಿಸುವ ಯೋಜನೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನಿಷ್ಠ 100 ಸಣ್ಣಪುಟ್ಟ ದೇಶಗಳಿಗೆ ಅನ್ವಯವಾಗುವಂತೆ ಬಹುಶಃ ಒಂದೇ ರೀತಿಯ ಸುಂಕ ನಿಗದಿ ಮಾಡುವ ಸಾಧ್ಯತೆಯೂ ಇದೆ’ ಎಂದು ಹೇಳಿದರು.

ADVERTISEMENT

‘ಔಷಧಗಳಿಗೆ ಸಂಬಂಧಿಸಿ ಸುಂಕದ ಪ್ರಮಾಣ ಎಷ್ಟಿರಲಿದೆ ಎಂಬ ಬಗ್ಗೆ ಈ ತಿಂಗಳಾಂತ್ಯಕ್ಕೆ ಘೋಷಿಸಲಾಗುವುದು’ ಎಂದರು.

ಆಗಸ್ಟ್‌ 1ರಿಂದ ಅನ್ವಯವಾಗುವಂತೆ ಸುಂಕವನ್ನು ವಿಧಿಸುವ ಕುರಿತಾಗಿ 10ಕ್ಕೂ ಅಧಿಕ ದೇಶಗಳು ಹಾಗೂ ಐರೋಪ್ಯ ಒಕ್ಕೂಟಕ್ಕೆ ಟ್ರಂಪ್‌ ಅವರು ಈ ತಿಂಗಳು ಪತ್ರಗಳನ್ನು ರವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.