ವಾಷಿಂಗ್ಟನ್: ಟೆಸ್ಲಾ ಕಂಪನಿಯ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆ ಮತ್ತು ಕಂಪನಿಯ ಷೇರು ಬೆಲೆಯಲ್ಲಿನ ಕುಸಿತದ ನಡುವೆಯೇ ಎಲಾನ್ ಮಸ್ಕ್‌ಗೆ ಬೆಂಬಲ ಸೂಚಕವಾಗಿ ಹೊಸ ಟೆಸ್ಲಾ ಕಾರು ಖರೀದಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಅವರ ಆದೇಶದ ಮೇರೆಗೆ ಸರ್ಕಾರಿ ನೌಕರರನ್ನು ಕಡಿತಗೊಳಿಸುವಲ್ಲಿ ಎಲಾನ್ ಮಸ್ಕ್ ಅವರ ಪಾತ್ರವನ್ನು ವಿರೋಧಿಸಿ ಅಮೆರಿಕದಾದ್ಯಂತ ಟೆಸ್ಲಾ ಕಂಪನಿ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.
ಟೆಸ್ಲಾ ಷೋ ರೂಂಗಳಿಗೆ ನುಗ್ಗಿದ ಪ್ರತಿಭನಕಾರರು, ಮಸ್ಕ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
‘ಎಲಾನ್ ಮಸ್ಕ್ ದೇಶಕ್ಕಾಗಿ ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಟೆಸ್ಲಾವನ್ನು ಬಹಿಷ್ಕರಿಸುವ ಸಲುವಾಗಿ ಎಡಪಂಥೀಯರು ಎಲಾನ್ ಮಸ್ಕ್ ಮೇಲೆ ದಾಳಿ ಮಾಡುತ್ತಿದ್ದಾರೆ. ಮಸ್ಕ್ ಅವರಿಗೆ ಬೆಂಬಲ ನೀಡುವ ಸಲುವಾಗಿ ನಾನು ಹೊಸ ಟೆಸ್ಲಾ ಕಾರನ್ನು ಖರೀದಿಸಲಿದ್ದೇನೆ’ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ರಂಪ್ ಬೆಂಬಲಕ್ಕೆ ಎಲಾನ್ ಮಸ್ಕ್ ಧನ್ಯವಾದ ಹೇಳಿದ್ದಾರೆ.
ಎಲಾನ್ ಮಸ್ಕ್ ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿಯೂ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.