ADVERTISEMENT

ವಿಶ್ವ ಆರೋಗ್ಯ ಸಂಸ್ಥೆಯೊಂದಿಗಿನ ಸಂಬಂಧ ಕೊನೆಗೊಳಿಸಿದ ಅಮೆರಿಕ

ಏಜೆನ್ಸೀಸ್
Published 30 ಮೇ 2020, 1:54 IST
Last Updated 30 ಮೇ 2020, 1:54 IST
   

ವಾಷಿಂಗ್ಟನ್‌: ಕೊರೊನಾ ವೈರಸ್‌ನ ಹರಡುವಿಕೆಯನ್ನು ಆರಂಭದಲ್ಲೇ ತಡೆಯಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿಫಲವಾಗಿದ್ದು, ಅದರೊಂದಿಗಿನ ಸಂಬಂಧವನ್ನು ಅಮೆರಿಕ ಕಡಿತಗೊಳಿಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

‘ಜಾಗತಿಕ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಸಂಸ್ಥೆ ಸರಿಯಾಗಿ ನಡೆದುಕೊಂಡಿಲ್ಲ,’ ಎಂದು ಈ ಮೊದಲು ಆರೋಪಿಸಿದ್ದ ಟ್ರಂಪ್ ಅದಕ್ಕೆ ಆರ್ಥಿಕ ನೆರವನ್ನು ನಿರ್ಬಂಧಿಸಿದ್ದರು.

10 ದಿನಗಳ ಹಿಂದೆ ಮತ್ತೆ ವಾಗ್ದಾಳಿ ನಡೆಸಿದ್ದ ಟ್ರಂಪ್‌, ‘ಡಬ್ಲ್ಯುಎಚ್‌ಒ ಚೀನಾದ ‘ಕೈಗೊಂಬೆ’ ಎಂದು ಆರೋಪಿಸಿದರು, ಅಲ್ಲದೆ, ಅದು ತನ್ನ ನಡೆಗಳಲ್ಲಿ ಸುಧಾರಣೆ ಕಂಡುಕೊಳ್ಳದೇ ಇದ್ದರೆ, ಆರ್ಥಿಕ ನೆರವನ್ನು ಶಾಶ್ವತವಾಗಿ ಕಡಿತಗೊಳಿಸುವುದಾಗಿ ಹೇಳಿದ್ದರು.

ADVERTISEMENT

‘ವಿನಂತಿ ಮಾಡಲಾದ ಮತ್ತು ಅತ್ಯಗತ್ಯವಿರುವ ಸುಧಾರಣೆಗಳನ್ನು ಮಾಡಲು ವಿಶ್ವಸಂಸ್ಥೆ ವಿಫಲವಾಗಿದೆ. ಹೀಗಾಗಿ ನಾವು ಅದರೊಂದಿಗಿನ ನಮ್ಮ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇವೆ,’ ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.