ADVERTISEMENT

ಶತಕೋಟಿ ಡಾಲರ್ ಮೊಕದ್ದಮೆ ಹೂಡುವುದಾಗಿ ಟ್ರಂಪ್‌ ಬೆದರಿಕೆ: ಬಿಬಿಸಿ ಭವಿಷ್ಯ ಮಸುಕು?

ಏಜೆನ್ಸೀಸ್
Published 13 ನವೆಂಬರ್ 2025, 0:22 IST
Last Updated 13 ನವೆಂಬರ್ 2025, 0:22 IST
   

ಲಂಡನ್: ಶತಕೋಟಿ ಡಾಲರ್ ಪರಿಹಾರ ಕೋರಿ ಬಿಬಿಸಿ ವಿರುದ್ಧ ಮೊಕದ್ದಮೆ ಹೂಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಬೆದರಿಕೆ ಒಡ್ಡಿರುವುದು ಸುದ್ದಿವಾಹಿನಿಯ ಭವಿಷ್ಯವನ್ನು ಮಸುಕಾಗಿಸಲಿದೆಯೇ ಎಂಬ ಚರ್ಚೆ ನಡೆದಿದೆ.

ಆದರೆ, ಟ್ರಂಪ್ ಕೈಗೊಳ್ಳಲು ಉದ್ದೇಶಿಸಿರುವ ಕ್ರಮವು ಕಾನೂನಿನ ಬೆಂಬಲ ಇರದ ಗೊಡ್ಡು ಬೆದರಿಕೆಯಷ್ಟೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

2021ರ ಜನವರಿ 6ರಂದು ಟ್ರಂಪ್ ಅವರ ಬೆಂಬಲಿಗರು ಕ್ಯಾಪಿಟಲ್‌ (ಅಮೆರಿಕದ ಸಂಸತ್) ಮೇಲೆ ದಾಳಿ ನಡೆಸಿದ್ದರು. ಇದಕ್ಖೂ ಮುನ್ನ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಟ್ರಂಪ್‌ ಭಾಷಣ ಮಾಡಿದ್ದರು. ಈ ಭಾಷಣವನ್ನು ತಿರುಚಿ ಪ್ರಸಾರ ಮಾಡಲಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಈ ಆರೋಪಗಳಿಗೆ ಸಂಬಂಧಿಸಿ, ಟ್ರಂಪ್‌ ಅವರ ವಕೀಲರು ಬಿಬಿಸಿಗೆ ನೋಟಿಸ್‌ ಕಳುಹಿಸಿದ್ದಾರೆ.

ADVERTISEMENT

ಟ್ರಂಪ್‌ ಅವರು ತಮ್ಮ ನಡೆಗಳನ್ನು ಟೀಕಿಸಿ ಸುದ್ದಿ ಪ್ರಸಾರ ಮಾಡುವ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸುವುದು ಸಾಮಾನ್ಯ ಸಂಗತಿ. ಕೆಲ ಪ್ರಕರಣಗಳಲ್ಲಿ ಅವರಿಗೆ ಕೋಟ್ಯಂತರ ಡಾಲರ್‌ ಪರಿಹಾರವೂ ಸಿಕ್ಕಿದೆ ಎಂದು ಬ್ರಿಟನ್‌ನ ಕಾನೂನುತಜ್ಞರು ಹೇಳುತ್ತಾರೆ. ಆದರೆ, ಬಿಬಿಸಿ ವಿರುದ್ಧ ನಡೆಸಲು ಉದ್ದೇಶಿಸಿರುವ ಕಾನೂನು ಹೋರಾಟದಲ್ಲಿ ಅವರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದೂ ಹೇಳುತ್ತಾರೆ.

‘ಬಿಬಿಸಿ ವಿರುದ್ಧ ಟ್ರಂಪ್‌ ದಾಖಲಿಸುವ ಮೊಕದ್ದಮೆಯು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ’ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳ ಪರ ವಕಾಲತ್ತು ವಹಿಸುವ ಅಟಾರ್ನಿ ಮಾರ್ಕ್ ಸ್ಟೀಫನ್ಸ್‌ ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.