

ವಾಷಿಂಗ್ಟನ್: ದಕ್ಷಿಣ ಕೊರಿಯಾದ ಸರಕುಗಳ ಮೇಲಿನ ಸುಂಕವನ್ನು ಏರಿಕೆ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ.
ಕಳೆದ ವರ್ಷ ಘೋಷಣೆಯಾದ ವ್ಯಾಪಾರ ಒಪ್ಪಂದದ ಚೌಕಟ್ಟಿಗೆ ದೇಶದ ಶಾಸಕಾಂಗವು ಇನ್ನೂ ಒಪ್ಪಿಗೆ ನೀಡದ ಕಾರಣ ಸುಂಕವನ್ನು ಏರಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
‘ದಕ್ಷಿಣ ಕೊರಿಯಾದ ಆಟೊಮೊಬೈಲ್, ಔಷಧಗಳ ಮೇಲಿನ ಆಮದು ಸುಂಕವನ್ನು ಶೇ 15ರಿಂದ ಶೇ 25ಕ್ಕೆ ಏರಿಕೆ ಮಾಡಲಾಗುವುದು’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
‘ಅಮೆರಿಕಕ್ಕೆ ವ್ಯಾಪಾರ ಒಪ್ಪಂದಗಳು ಬಹಳ ಮುಖ್ಯವಾಗುತ್ತವೆ. ಒಪ್ಪಂದದ ಅನುಸಾರವಾಗಿ ಸರಕುಗಳ ಮೇಲಿನ ಸುಂಕವನ್ನು ತ್ವರಿತಗತಿಯಲ್ಲಿ ಕಡಿಮೆ ಮಾಡುತ್ತೇವೆ. ಪಾಲುದಾರ ರಾಷ್ಟ್ರಗಳಿಂದಲೂ ಅದನ್ನೇ ನಿರೀಕ್ಷಿಸುತ್ತೇವೆ’ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.