ADVERTISEMENT

ನಿಷ್ಠರನ್ನು ಬೆಂಬಲಿಸಿ: ರಿಪಬ್ಲಿಕನ್ನರಿಗೆ ಟ್ರಂಪ್‌ ಸೂಚನೆ

ಅಮೆರಿಕ: ಮುಂದಿನ ವರ್ಷ ಮಧ್ಯಂತರ ಚುನಾವಣೆ

ಏಜೆನ್ಸೀಸ್
Published 6 ಜೂನ್ 2021, 6:02 IST
Last Updated 6 ಜೂನ್ 2021, 6:02 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ನಾರ್ತ್ ಕೆರೊಲಿನಾ, ಅಮೆರಿಕ: ಮುಂದಿನ ವರ್ಷ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ತಮಗೆ ನಿಷ್ಠರಾದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ರಿಪಬ್ಲಿಕನ್ನರಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂಚಿಸಿದ್ದಾರೆ.

ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಲು ಮುಂದಾಗಿರುವ ಟ್ರಂಪ್‌, ಅದಕ್ಕೂ ಮುನ್ನ ಮುಂದಿನ ವರ್ಷದ ಚುನಾವಣೆಯಲ್ಲಿ ನಿಷ್ಠರನ್ನು ಸಂಸತ್‌ಗೆ ಕಳಿಸುವ ಮೂಲಕ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.

ನಾರ್ತ್‌ ಕೆರೊಲಿನಾದಲ್ಲಿ ನಡೆದ ಪಕ್ಷದ ಸಭೆಯನ್ನು ಉದ್ದೇಶಿಸಿ ಅವರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ‘ಅಮೆರಿಕದ ಅಸ್ತಿತ್ವವು ಆಡಳಿತದ ಪ್ರತಿ ಹಂತದಲ್ಲಿ ಎಷ್ಟು ಜನ ರಿಪಬ್ಲಿಕನ್‌ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬುದನ್ನು ಅವಲಂಬಿಸಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರ್ಯ ಮುಂದಿನ ವರ್ಷದ ಮಧ್ಯಂತರ ಚುನಾವಣೆಯಿಂದಲೇ ಆರಂಭವಾಗಬೇಕು’ ಎಂದು ಹೇಳಿದರು.

ADVERTISEMENT

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಹಲವು ತಿಂಗಳು ಕಳೆದಿವೆ. ಕೆಲವು ಸಾಮಾಜಿಕ ಮಾಧ್ಯಮಗಳು ಸಹ ಟ್ರಂಪ್‌ ಅವರ ಖಾತೆಗಳನ್ನು ಅಮಾನತುಗೊಳಿಸಿವೆ. ಹೀಗಾಗಿ ತಮ್ಮ ವಿಚಾರಗಳನ್ನು ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ತಲುಪಿಸಿ, ಆ ಮೂಲಕ ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಅವರು ಈ ಸಮಾವೇಶವನ್ನು ಆಯೋಜಿಸಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.