ADVERTISEMENT

US Presidential Election: ಸೌತ್‌ ಕರೋಲಿನಾದಲ್ಲೂ ಟ್ರಂಪ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 13:34 IST
Last Updated 25 ಫೆಬ್ರುವರಿ 2024, 13:34 IST
   

ಚಾರ್ಲ್ಸ್‌ಟನ್ (ಸೌತ್‌ ಕರೋಲಿನಾ): ಸೌತ್‌ ಕರೋಲಿನಾದ ಮಾಜಿ ಗವರ್ನರ್‌, ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಸ್ಪರ್ಧೆಯ ಆಕಾಂಕ್ಷಿಯಾದ ಭಾರತ ಮೂಲದ ನಿಕ್ಕಿ ಹ್ಯಾಲಿ ಅವರನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶನಿವಾರ ಸುಲಭವಾಗಿ ಸೋಲಿಸಿದರು. ಈ ಮೂಲಕ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಟ್ರಂಪ್‌ ತನ್ನ ಹಾದಿಯನ್ನು ಮತ್ತಷ್ಟು ಬಲಪಡಿಸಿಕೊಂಡರು.

ಈಗಾಗಲೇ ಅಯೋವಾ, ನ್ಯೂ ಹ್ಯಾಂಪ್‌ಶೈರ್‌, ನೆವಡಾ, ಯು.ಎಸ್‌. ವರ್ಜಿನ್‌ ಐಲ್ಯಾಂಡ್ಸ್‌ಗಳಲ್ಲಿ ಗೆಲುವು ದಾಖಲಿಸಿರುವ ಟ್ರಂಪ್‌, ಪಕ್ಷದ ಇತರ ಸ್ಪರ್ಧಿಗಳಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇದೀಗ ಸೌತ್‌ ಕರೋಲಿನಾದಲ್ಲೂ ಟ್ರಂಪ್‌ ಅವರಿಗೆ ಅಭೂತಪೂರ್ವ ವಿಜಯ ಒಲಿದಿದೆ. ಇದು ಹ್ಯಾಲಿ ಅವರನ್ನು ಸ್ಪರ್ಧೆಯಿಂದ ನಿರ್ಗಮಿಸುವಂತೆ ಒತ್ತಡ ಹೆಚ್ಚಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ವಿಜಯದ ಬಳಿಕ ಸಂತಸ ಹಂಚಿಕೊಂಡ ಟ್ರಂಪ್‌, ‘ಈಗಿರುವಂತೆ ರಿಪಬ್ಲಿಕನ್‌ ಪಕ್ಷವನ್ನು ನಾನು ಹಿಂದೆಂದೂ ನೋಡಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.