ADVERTISEMENT

ಇಸ್ರೇಲ್–ಹಮಾಸ್‌ ಕದನ ವಿರಾಮ: ಮೊದಲ ಹಂತ ಬಹುತೇಕ ಪೂರ್ಣ

ಸಂಕೀರ್ಣವಾದ ಎರಡನೇ ಹಂತವನ್ನು ಎದುರು ನೋಡುತ್ತಿರುವ ಹಲವು ರಾಷ್ಟ್ರಗಳು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 16:46 IST
Last Updated 9 ಡಿಸೆಂಬರ್ 2025, 16:46 IST
<div class="paragraphs"><p>ಹಮಾಸ್‌– ಇಸ್ರೇಲ್‌ ನಡುವೆ ಕದನ ವಿರಾಮ ಏರ್ಪಟ್ಟಿದ್ದರಿಂದ&nbsp;ಗಾಜಾದ ವಿವಿದ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದ ಪ್ಯಾಲೆಸ್ಟೀನಿಯನ್ನರು ಶುಕ್ರವಾರ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು&nbsp; &nbsp; &nbsp;</p></div>

ಹಮಾಸ್‌– ಇಸ್ರೇಲ್‌ ನಡುವೆ ಕದನ ವಿರಾಮ ಏರ್ಪಟ್ಟಿದ್ದರಿಂದ ಗಾಜಾದ ವಿವಿದ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದ ಪ್ಯಾಲೆಸ್ಟೀನಿಯನ್ನರು ಶುಕ್ರವಾರ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು     

   

ಎಎಫ್‌ಪಿ ಚಿತ್ರ

ದೋಹಾ: ಇಸ್ರೇಲ್ ಮತ್ತು ಹಮಾಸ್‌ ನಡುವಿನ ಕದನ ವಿರಾಮದ ಮೊದಲ ಹಂತವು ಬಹುತೇಕ ಪೂರ್ಣಗೊಂಡಿದ್ದು, ಒಬ್ಬ ಒತ್ತೆಯಾಳು ಮಾತ್ರ ಗಾಜಾದಲ್ಲಿ‌ ಉಳಿದಿದ್ದಾರೆ.

ಮಧ್ಯಪ್ರಾಚ್ಯವನ್ನು ಪುನರ್‌ರೂಪಿಸಬಹುದಾದ ಸಂಕೀರ್ಣವಾದ ಎರಡನೇ ಹಂತದ ಕದನ ವಿರಾಮವನ್ನು ಇಸ್ರೇಲ್, ಪ್ಯಾಲೆಸ್ಟೀನ್‌ನ ಹಮಾಸ್‌ ಸಂಘಟನೆ, ಮಧ್ಯಸ್ಥಿಕೆ ವಹಿಸಿರುವ ಅಮೆರಿಕ ಮತ್ತು ಇತರ ಅಂತರರಾಷ್ಟ್ರೀಯ ಸಂಘಟನೆಗಳು ಎದುರು ನೋಡುತ್ತಿವೆ.

ಗಾಜಾದಲ್ಲಿ ಹಮಾಸ್‌ ಆಡಳಿತವನ್ನು ಕೊನೆಗೊಳಿಸುವ ಉದ್ದೇಶ ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ 20 ಅಂಶಗಳ ಯೋಜನೆಯನ್ನು ವಿಶ್ಚಸಂಸ್ಥೆಯ ಭದ್ರತಾ ಮಂಡಳಿಯು ಅಂಗೀಕರಿಸಿದೆ. ಇದು ಯಶಸ್ವಿಯಾದರೆ ಅಂತರರಾಷ್ಟ್ರೀಯ ಮೇಲ್ವಿಚಾರಣೆಯಲ್ಲಿ ಮಿಲಿಟರಿ ಮುಕ್ತ ಗಾಜಾ ನಿರ್ಮಾಣವಾಗಲಿದೆ. ಇಸ್ರೇಲ್ ಮತ್ತು ಅರಬ್‌ ದೇಶಗಳ ನಡುವಿನ ಸಂಬಂಧ ತಿಳಿಗೊಂಡು, ಪ್ಯಾಲೆಸ್ಟೀನ್ ಸ್ವಾತಂತ್ರ್ಯಕ್ಕೆ ದಾರಿಯಾಗಲಿದೆ.

ಆದರೆ ಒಪ್ಪಂದ ಅರ್ಧದಲ್ಲಿ ಮುರಿದುಬಿದ್ದರೆ. ಗಾಜಾ ಮುಂದಿನ ವರ್ಷ ಸಂಕಷ್ಟಕ್ಕೆ ಸಿಲುಕಲಿದೆ. ಅಲ್ಲಿನ ಹಲವು ಪ್ರದೇಶಗಳು ‌ಹಮಾಸ್‌ ಹಿಡಿತದಲ್ಲೇ ಉಳಿಯಲಿವೆ. ಇಸ್ರೇಲ್ ಭೀಕರ ದಾಳಿಯನ್ನು ನಡೆಸುವ ಸಾಧ್ಯತೆಗಳಿರುತ್ತವೆ ಮತ್ತು ಗಾಜಾದ ನಿವಾಸಿಗಳು ನಿರಾಶ್ರಿತರಾಗಿ, ನಿರುದ್ಯೋಗಿಗಳಾಗಿ, ಬೇರೆ ದೇಶಕ್ಕೆ ವಲಸೆ ಹೋಗಲಾರದೆ ಅಂತರರಾಷ್ಟ್ರೀಯ ನೆರವಿನ ಮೇಲೆಯೇ ‌ಅವಲಂಬಿತರಾಗಬೇಕಾಗುತ್ತದೆ.

‘ವಾರಾಂತ್ಯದಲ್ಲಿ ಕದನ ವಿರಾಮವು ನಿರ್ಣಾಯಕ ಹಂತದಲ್ಲಿತ್ತು. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಈ ತಿಂಗಳಲ್ಲಿ ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡಿ, ಮುಂದಿನ ಹೆಜ್ಜೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ’ ಎಂದು ಪ್ರಮುಖ ಮಧ್ಯಸ್ಥಗಾರರಾದ, ಕತಾರ್‌ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲರಹಮಾನ್‌ ಅಲ್ ಥನಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.