ADVERTISEMENT

ಚುನಾವಣೆ ಕುರಿತ ಟ್ರಂಪ್ ಆರೋಪ ಪ್ರಜಾಪ್ರಭುತ್ವಕ್ಕೆ ಕಳಂಕ: ಬರಾಕ್ ಒಬಾಮ

ಪಿಟಿಐ
Published 13 ನವೆಂಬರ್ 2020, 8:21 IST
Last Updated 13 ನವೆಂಬರ್ 2020, 8:21 IST
ಒಬಾಮ
ಒಬಾಮ   

ವಾಷಿಂಗ್ಟನ್‌: ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಧಾರ ರಹಿತ ಚುನಾವಣಾ ಅಕ್ರಮಗಳ ಆರೋಪಗಳು ಜೋ ಬೈಡನ್‌ ಅವರ ಹೊಸ ಆಡಳಿತಕ್ಕೆ ಮಾತ್ರವಲ್ಲ, ಪ್ರಜಾಪ್ರಭುತ್ವವಕ್ಕೆ ಕಳಂಕ ತರುವ ಒಂದು ಪ್ರಯತ್ನ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪ್ರತಿಪಾದಿಸಿದ್ದಾರೆ.

ಚುನಾವಣೆ ನಂತರ ಇದೇ ಮೊದಲ ಬಾರಿಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಟ್ರಂಪ್ ಅವರ ಈ ಆಧಾರ ರಹಿತ ಆರೋಪಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಇದೊಂದು ಅಪಾಯದ ಮಾರ್ಗವೂ ಆಗಿದೆ‘ ಎಂದು ಹೇಳಿದ್ದಾರೆ.

‘ಟ್ರಂಪ್ ಮಾಡಿರುವ ಸುಳ್ಳು ಆರೋಪಗಳ ಜತೆಗೆ, ಪ್ರಜಾಪ್ರಭುತ್ವವನ್ನು ಚೆನ್ನಾಗಿ ತಿಳಿದಿರುವ ಇತರೆ ರಿಪಬ್ಲಿಕನ್ ಪಕ್ಷದ ಅಧಿಕಾರಿಗಳು, ಇಂಥವರ ಹಿಂದೆ ಹೋಗುತ್ತಿದ್ದಾರಲ್ಲಾ ಎಂದು ನನ್ನನ್ನು ಚಿಂತೆಗೀಡುಮಾಡಿದೆ‘ ಎಂದು ಒಬಾಮ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.