ADVERTISEMENT

ಟರ್ಕಿ ಭೂಕಂಪ: ₹8.17 ಲಕ್ಷ ಕೋಟಿಗೂ ಹೆಚ್ಚು ಹಾನಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 15:27 IST
Last Updated 7 ಮಾರ್ಚ್ 2023, 15:27 IST
ಟರ್ಕಿ ಭೂಕಂಪ
ಟರ್ಕಿ ಭೂಕಂಪ   

ಜಿನೀವಾ (ರಾಯಿಟರ್ಸ್‌): ಟರ್ಕಿಯಲ್ಲಿ ಭೂಕಂಪದಿಂದ ಆಗಿರುವ ಹಾನಿ ಅಂದಾಜು ₹8.17 ಲಕ್ಷ ಕೋಟಿಗೂ (100 ಬಿಲಿಯನ್‌ ಡಾಲರ್‌) ಹೆಚ್ಚಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳ ಅಧಿಕಾರಿ ಹೇಳಿದ್ದಾರೆ.

ಮಾರ್ಚ್ 16ರಂದು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಪ್ರಮುಖ ದಾನಿಗಳ ಸಮಾವೇಶಕ್ಕೂ ಮೊದಲು ಮಂಗಳವಾರ ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಅಧಿಕಾರಿ ಲೂಯಿಸಾ ವಿಂಟನ್‌ ಈ ವಿಷಯ ತಿಳಿಸಿದರು.

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದ ಲಕ್ಷಾಂತರ ಮನೆಗಳು ನಾಶವಾಗಿವೆ. ತುರ್ತು ಅಗತ್ಯಗಳು ಅಪಾರವಾಗಿವೆ. ಆದರೆ, ಸಂಪನ್ಮೂಲಗಳು ವಿರಳವಾಗಿವೆ ಎಂದು ಅವರು ಹೇಳಿದರು.

ADVERTISEMENT

ಫೆಬ್ರುವರಿ 6ರಂದು ಸಂಭವಿಸಿದ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾದಲ್ಲಿ 52 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.