ADVERTISEMENT

ಟರ್ಕಿ: ಇಸ್ರೇಲ್ ದಾಳಿ ಖಂಡಿಸಿ ಸದನದಲ್ಲಿ ಮಾತನಾಡುತ್ತಿರುವಾಗಲೇ ಸಂಸದ ಸಾವು

ಏಜೆನ್ಸೀಸ್
Published 16 ಡಿಸೆಂಬರ್ 2023, 3:00 IST
Last Updated 16 ಡಿಸೆಂಬರ್ 2023, 3:00 IST
<div class="paragraphs"><p>ಸಂಸದ </p></div>

ಸಂಸದ

   

ಇಸ್ತಾಂಬುಲ್‌: ಟರ್ಕಿ ಸಂಸತ್‌ನಲ್ಲಿ ಇಸ್ರೇಲ್ ದಾಳಿ ಖಂಡಿಸಿ ಭಾಷಣ ಮಾಡುತ್ತಿದ್ದ ಸಂಸದ ಹಸನ್ ಬಿಟ್ಮೆಜ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಹಸನ್ ಬಿಟ್ಮೆಜ್ ಅವರು ಸದನದಲ್ಲಿ ಇಸ್ರೇಲ್‌ ಮತ್ತು ಗಾಜಾ ಬಗ್ಗೆ ಮಾತನಾಡುತ್ತಿದ್ದರು. ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್ ದಾಳಿಯನ್ನು ತೀವ್ರವಾಗಿ ಖಂಡಿಸಿದ ಅವರು, ದೇವರು (ಅಲ್ಲಾ) ಇಸ್ರೇಲ್‌ ಅನ್ನು ಕ್ಷಮಿಸುವುದಿಲ್ಲ ಎಂದು ಹೇಳಿ ಕುಸಿದು ಬಿದ್ದರು. ಕೂಡಲೇ ಅವರನ್ನು ಭದ್ರತಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದರಾದರೂ ಆ ವೇಳೆಗೆ ಮೃತಪಟ್ಟಿದ್ದರು. ನಂತರ ಹಸನ್ ಬಿಟ್ಮೆಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದರು.

ADVERTISEMENT

ಹಸನ್ ಬಿಟ್ಮೆಜ್ ಅವರು ಭಾಷಣ ಮಾಡಿ ಕುಸಿದು ಬಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ಕೈರೋದ ಅಲ್ ಅಜರ್ ವಿಶ್ವವಿದ್ಯಾನಿಲಯದ ಪದವೀಧರರಾದ ಬಿಟ್ಮೆಜ್ ಅವರು ಇಸ್ಲಾಮಿಕ್ ಯೂನಿಯನ್ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದರು. ಕೆಲವು ವರ್ಷಗಳ ಹಿಂದೆ ಇಸ್ಲಾಮಿಕ್ ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ಅವರು ಫೆಲಿಸಿಟಿಯ ಸಂಸದರಾಗಿದ್ದಾರೆ.

ಬಿಟ್ಮೆಜ್ ಅವರು ಪತ್ನಿ, ಮಗುವನ್ನು ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.