ADVERTISEMENT

ಗಾಯಕಿ ಟೇಲರ್ ಸ್ವಿಫ್ಟ್ ಕಾರ್ಯಕ್ರಮದಲ್ಲಿ ಚಾಕು ಇರಿತ: ಇಬ್ಬರು ಬಾಲಕರು ಸಾವು

17 ವರ್ಷದ ಬಾಲಕನೊಬ್ಬ ಚಾಕು ಹಿಡಿದು ನಡೆಸಿದ ದಾಳಿ

ಏಜೆನ್ಸೀಸ್
Published 30 ಜುಲೈ 2024, 11:00 IST
Last Updated 30 ಜುಲೈ 2024, 11:00 IST
<div class="paragraphs"><p>ಟೇಲರ್ ಸ್ವಿಫ್ಟ್</p></div>

ಟೇಲರ್ ಸ್ವಿಫ್ಟ್

   

ಲಂಡನ್: 17 ವರ್ಷದ ಬಾಲಕನೊಬ್ಬ ಚಾಕು ಹಿಡಿದು ನಡೆಸಿದ ದಾಳಿಗೆ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಇಂಗ್ಲೆಂಡ್‌ನ ವಾಯವ್ಯ ಪ್ರಾಂತ್ಯವಾದ ಸೌತ್‌ಪೋರ್ಟ್ ನಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಒಂಬತ್ತು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಆರು ಬಾಲಕರು ಹಾಗೂ ಮೂವರು ವಯಸ್ಕರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಭಾನುವಾರ ಸೌತ್‌ಪೋರ್ಟ್ ನ ಹಾರ್ಟ್ ಸ್ಟ್ರೀಟ್‌ನಲ್ಲಿ ಗಾಯಕಿ ಟೇಲರ್ ಸ್ವಿಫ್ಟ್ ಅವರಿಗೆ ಸಂಬಂಧಿಸಿದ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಸೇರಿದ್ದರು.

ಚಾಕು ಹಿಡಿದು ಏಕಾಏಕಿ ದಾಳಿ ಮಾಡಿದ ಬಾಲಕನ ಉದ್ದೇಶ ಏನಾಗಿತ್ತು ಎಂಬುದು ಇನ್ನೂ ತಿಳಿದು ಬಂದಿಲ್ಲ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಈ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಗಾಯಕಿ ಟೇಲರ್ ಸ್ವಿಫ್ಟ್, ಇಂತಹ ಘಟನೆಗಳು ಆಗಬಾರದು ಎಂದಿದ್ದಾರೆ. ಅಲ್ಲದೇ ಮೃತರ ಕುಟುಂಬಗಳಿಗೆ ₹25 ಲಕ್ಷ ನೆರವು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.