ADVERTISEMENT

ಕೊರೊನಾ: ಅಮೆರಿಕದಲ್ಲಿ ಭಾರತ ಮೂಲದ ವೈದ್ಯರಿಬ್ಬರ ಸಾವು

ಪಿಟಿಐ
Published 8 ಮೇ 2020, 10:53 IST
Last Updated 8 ಮೇ 2020, 10:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಕೊರೊನಾ ವೈರಸ್ ಸೋಂಕಿನಿಂದಾಗಿ ಭಾರತ ಮೂಲದ ವೈದ್ಯರಿಬ್ಬರು ಅಮೆರಿಕದ ನ್ಯೂಜೆರ್ಸಿಯಲ್ಲಿ ಮೃತಪಟ್ಟಿದ್ದಾರೆ. ಸತ್ಯೇಂದರ್ ದೇವ್ ಖನ್ನಾ (78) ಮತ್ತು ಅವರ ಪುತ್ರಿ ಪ್ರಿಯಾ ಖನ್ನಾ (43) ಮೃತಪಟ್ಟವರು.

ವೈದ್ಯರ ನಿಧನಕ್ಕೆ ಅಲ್ಲಿನ ಗವರ್ನರ್ ಫಿಲ್ ಮರ್ಫಿ ಸಂತಾಪ ಸೂಚಿಸಿದ್ದಾರೆ.

ಸತ್ಯೇಂದರ್ ದೇವ್ ಅವರು ಹಿರಿಯ ಶಸ್ತ್ರಚಿಕಿತ್ಸಕರಾಗಿದ್ದು ನ್ಯೂಜೆರ್ಸಿಯಾದ್ಯಂತ ಹಲವು ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಿಯಾ ಖನ್ನಾ ಅವರು ಇಂಟರ್ನಲ್ ಮೆಡಿಸಿನ್ ಮತ್ತು ಮೂತ್ರಪಿಂಡ ಶಾಸ್ತ್ರದಲ್ಲಿ ವಿಶೇಷ ತಜ್ಞೆಯಾಗಿದ್ದರು. ‘ಆರ್‌ಡಬ್ಲ್ಯುಜೆ ಬರ್ನಬಾಸ್ ಹೆಲ್ತ್’ ಅಂಗಸಂಸ್ಥೆಯಾದ ಯೂನಿಯನ್ ಹಾಸ್ಪಿಟಲ್‌ನಲ್ಲಿ ಮುಖ್ಯಸ್ಥೆಯಾಗಿದ್ದರು.

‘ಡಾ. ಸತ್ಯೇಂದರ್ ದೇವ್ ಖನ್ನಾ ಮತ್ತು ಡಾ. ಪ್ರಿಯಾ ಖನ್ನಾ, ಈ ತಂದೆ–ಮಗಳು ಇತರರಿಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಇವರದ್ದು ಆರೋಗ್ಯ ಮತ್ತು ಔಷಧ ಕ್ಷೇತ್ರಕ್ಕೆ ತಮ್ಮನ್ನು ತಾವು ಮೀಸಲಿಟ್ಟ ಕುಟುಂಬ. ಇವರ ತ್ಯಾಗಕ್ಕೆ ಪದಗಳಲ್ಲಿ ಸಂಪಾತ ಸೂಚಿಸಲು ಸಾಧ್ಯವಿಲ್ಲ’ ಎಂದು ಮರ್ಫಿ ಗುರುವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.