ADVERTISEMENT

ಭಾರತ ಮೂಲದ ಮಹಿಳೆಯರ ನೇಮಕ

ಪಿಟಿಐ
Published 7 ಜನವರಿ 2020, 18:21 IST
Last Updated 7 ಜನವರಿ 2020, 18:21 IST
ಅರ್ಚನಾ ರಾವ್
ಅರ್ಚನಾ ರಾವ್   

ನ್ಯೂಯಾರ್ಕ್: ಭಾರತೀಯ ಮೂಲದ ಇಬ್ಬರು ಮಹಿಳಾ ವಕೀಲರನ್ನು ಕ್ರಿಮಿನಲ್ ಮತ್ತು ಸಿವಿಲ್ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನಾಗಿ ನ್ಯೂಯಾರ್ಕ್ ನಗರದ ಮೇಯರ್ಬಿಲ್ ದೆ ಬ್ಲಾಸಿಯೊ ನೇಮಿಸಿದ್ದಾರೆ.

ಅರ್ಚನಾ ರಾವ್ ಅವರನ್ನು ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಹಾಗೂ ದೀಪಾ ಅಂಬೇಕರ್ ಅವರನ್ನು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಮರು ನೇಮಿಸಲಾಗಿದೆ.

ಅರ್ಚನಾ ರಾವ್ ಅವರನ್ನು ಮೊದಲ ಬಾರಿಗೆ 2019ರ ಜನವರಿಯಲ್ಲಿ ಮಧ್ಯಂತರ ಸಿವಿಲ್ ಕೋರ್ಟ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. ಇದಕ್ಕೂ ಮುನ್ನ ಅವರು ನ್ಯೂಯಾರ್ಕ್ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯಲ್ಲಿ 17 ವರ್ಷ ಕಾಲ ಕಾರ್ಯ ನಿರ್ವಹಿಸಿದ್ದರು.

ADVERTISEMENT

ಅರ್ಚನಾ ವಸ್ಸರ್ ಕಾಲೇಜಿನ ಪದವೀಧರೆಯಾಗಿದ್ದು, ಪೋರ್ದಂ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ದೀಪಾ ಅಂಬೇಕರ್ ಅವರನ್ನು 2018ರ ಮೇ ತಿಂಗಳಲ್ಲಿ ಮಧ್ಯಂತರ ಸಿವಿಲ್‌ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. ಇದಕ್ಕೂ ಮುನ್ನ ಅವರು ನ್ಯೂಯಾರ್ಕ್ ಸಿಟಿ ಕೌನ್ಸಿಲ್‌ನೊಂದಿಗೆ ಹಿರಿಯ ವಕೀಲರಾಗಿ ಮತ್ತು ಸಾರ್ವಜನಿಕ ಸುರಕ್ಷತೆ ಸಮಿತಿಯ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ದೀಪಾ ಅವರು ಮಿಚಿಗನ್ ವಿಶ್ವವಿದ್ಯಾಲಯದ ಪದವೀಧರೆಯಾಗಿದ್ದು, ರುಟ್ಜರ್ಸ್‌ ಕಾನೂನು ಶಾಲೆಯಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.