ADVERTISEMENT

ಸುಮಾರು 11 ಲಕ್ಷ ಉಕ್ರೇನಿಯನ್ನರು ರಷ್ಯಾಗೆ ಗಡಿಪಾರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2022, 3:59 IST
Last Updated 3 ಮೇ 2022, 3:59 IST
ಅಜೋವ್ ಸ್ಟಾಲ್ ಘಟಕ: ಪಿಟಿಐ ಚಿತ್ರ
ಅಜೋವ್ ಸ್ಟಾಲ್ ಘಟಕ: ಪಿಟಿಐ ಚಿತ್ರ   

ಕೀವ್: ಸುಮಾರು 2 ಲಕ್ಷ ಮಕ್ಕಳು ಸೇರಿದಂತೆ 11 ಲಕ್ಷ ಉಕ್ರೇನಿಯನ್ನರನ್ನು ರಷ್ಯಾಕ್ಕೆ ಬಲವಂತವಾಗಿ ಗಡಿಪಾರು ಮಾಡಲಾಗಿದೆ ಎಂದು ಉಕ್ರೇನ್ ಹೇಳಿದೆ. ಇದೇವೇಳೆ, ಫೆಬ್ರುವರಿ 24 ರಿಂದ 10,92,137 ಉಕ್ರೇನಿಯನ್ನರನ್ನು ರಷ್ಯಾಕ್ಕೆ ಗಡೀಪಾರು ಮಾಡಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಉಕ್ರೇನ್ ಅಧಿಕಾರಿಗಳ ಭಾಗವಹಿಸುವಿಕೆ ಇಲ್ಲದೆ 1,847 ಮಕ್ಕಳು ಸೇರಿದಂತೆ 11,500 ಕ್ಕೂ ಹೆಚ್ಚು ಜನರನ್ನು ಸೋಮವಾರ ಉಕ್ರೇನ್‌ನಿಂದ ರಷ್ಯಾಕ್ಕೆ ಸಾಗಿಸಲಾಯಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಫೆಬ್ರುವರಿ 24ರಂದು ರಷ್ಯಾವು ಆಕ್ರಮಣ ಆರಂಭಿಸುವುದಕ್ಕೂ ಮುನ್ನ ಸ್ವತಂತ್ರವೆಂದು ಗುರುತಿಸಿದ ಉಕ್ರೇನ್‌ನ ರಷ್ಯಾದ ಬೆಂಬಲಿತ ಪ್ರದೇಶಗಳಾದ ಡೊನೆಟ್ಸ್‌ಕ ಮತ್ತು ಲುಹಾನ್ಸ್‌ಕ ಪೀಪಲ್ಸ್ ರಿಪಬ್ಲಿಕ್‌ಗಳಿಂದ ಜನರ ಸ್ಥಳಾಂತರ ನಡೆದಿದೆ.

ADVERTISEMENT

ಅವರ ಕೋರಿಕೆಯ ಮೇರೆಗೆ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಷ್ಯಾ ಹೇಳುತ್ತದೆ. ಆದರೆ, ಉಕ್ರೇನ್, ಯುದ್ಧದ ಆರಂಭದಿಂದಲೂ ಸಾವಿರಾರು ಜನರನ್ನು ರಷ್ಯಾಕ್ಕೆ ಬಲವಂತವಾಗಿ ಗಡೀಪಾರು ಮಾಡಿದೆ ಎಂದು ಹೇಳಿದೆ.

ಸೋಮವಾರ, ರಷ್ಯಾ ಮುತ್ತಿಗೆ ಹಾಕಿದ ಮರಿಯುಪೋಲ್‌ನ ದೈತ್ಯ ಉಕ್ಕಿನ ಘಟಕದಿಂದ ಸ್ಥಳಾಂತರಿಸಲ್ಪಟ್ಟ ನಾಗರಿಕರು ವಿಶ್ವಸಂಸ್ಥೆ ಮತ್ತು ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿಯ ಭಾಗವಾಗಿ ಉಕ್ರೇನ್ ಹಿಡಿತದಲ್ಲಿರುವ ನಗರವಾದ ಜಪೋರಿಝಿಯಾಗೆ ತೆರಳಿದ್ದಾರೆ.

ಫೆಬ್ರುವರಿ 24 ರಿಂದ ಸುಮಾರು 2,00,000 ಮಕ್ಕಳು ಮತ್ತು 1.1 ಮಿಲಿಯನ್ ಜನರನ್ನು ಉಕ್ರೇನ್‌ನಿಂದ ರಷ್ಯಾಕ್ಕೆ ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.