ADVERTISEMENT

ಕರಾಚಿ: ಇಬ್ಬರು ತಾಲಿಬಾನ್‌ ಉಗ್ರರ ಹತ್ಯೆ

ಪಿಟಿಐ
Published 14 ಮಾರ್ಚ್ 2023, 14:45 IST
Last Updated 14 ಮಾರ್ಚ್ 2023, 14:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರಾಚಿ: ಕಳೆದ ತಿಂಗಳು ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ನಡೆದ ದಾಳಿಯನ್ನು ಸಂಘಟಿಸಿದ ಪಾಕಿಸ್ತಾನಿ ತಾಲಿಬಾನ್‌ ಉಗ್ರ ಸಂಘಟನೆಯ ಇಬ್ಬರು ಪ್ರಮುಖ ಸೂತ್ರಧಾರಿಗಳನ್ನು ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ (ಸಿಟಿಡಿ) ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಫೆಬ್ರುವರಿಯಲ್ಲಿ ಭಾರೀ ಶಸ್ತ್ರಸಜ್ಜಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರರು ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಮೂವರು ಉಗ್ರರು ಮತ್ತು ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಸತ್ತಿದ್ದರು.

‘ಟಿಟಿಪಿ ಉಗ್ರರು ಕರಾಚಿಗೆ ಬರುವ ಕುರಿತು ಸಿಟಿಡಿ ಸಿಬ್ಬಂದಿಗೆ ಭಾನುವಾರ ರಾತ್ರಿ ಮಾಹಿತಿ ದೊರಕಿತ್ತು. ಸೋಮವಾರ ಬೆಳಿಗ್ಗೆ ಎರಡು ಬೈಕ್‌ಗಳಲ್ಲಿ ಉಗ್ರರು ಕರಾಚಿಗೆ ಬಂದಿದ್ದರು. ಈ ವೇಳೆ ಸಿಟಿಡಿ ಸಿಬ್ಬಂದಿ ಉಗ್ರರಿಗೆ ನಿಲ್ಲುವಂತೆ ಸೂಚಿಸಿದರು. ಆದರೆ ಉಗ್ರರು ಸಿಟಿಡಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದರು. ಪ್ರತಿದಾಳಿ ನಡೆಸಿದ ಸಿಟಿಡಿ, ಇಬ್ಬರು ಉಗ್ರರನ್ನು ಕೊಂದರು. ಉಳಿದ ಇಬ್ಬರು ಉಗ್ರರು ಶರಣಾದರು’ ಎಂದು ವರದಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.