ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿರುವ ದೃಶ್ಯ
–ಸಿಐಎಸ್‌ಎಫ್ ಎಕ್ಸ್ ಚಿತ್ರಗಳು
ದುಬೈ: ಕಳೆದ ವಾರ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅವಘಡದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರ ಕುಟುಂಬಕ್ಕೆ ₹6 ಕೋಟಿ ನೆರವು ನೀಡುವುದಾಗಿ ಯುಎಇ ಮೂಲದ ವೈದ್ಯ ಶಂಶೀರ್ ವಯಾಲಿಲ್ ಘೋಷಿಸಿದ್ದಾರೆ.
ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ವಿಮಾನ ಡಿಕ್ಕಿಹೊಡೆದು ಪತನಗೊಂಡ ಪರಿಣಾಮ ಹಾಸ್ಟೆಲ್ ಹಾಗೂ ಅಲ್ಲಿನ ಊಟದ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳು, ವೈದ್ಯರು ಗಾಯಗೊಂಡಿದ್ದರು. ಕೆಲವರು ಮೃತಪಟ್ಟಿದ್ದರು.
ಮೃತಪಟ್ಟ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ಒಂದು ಕೋಟಿ ನೀಡುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.