ADVERTISEMENT

ಉಕ್ರೇನ್‌ನ ನೊಂದ ನಾಗರಿಕರಿಗೆ ನೆಲೆ ನೀಡಲು ನಿರ್ಧಾರ ಮಾಡಿದ ಈ ಅರಬ್ ದೇಶ

ಐಎಎನ್ಎಸ್
Published 16 ಏಪ್ರಿಲ್ 2022, 11:23 IST
Last Updated 16 ಏಪ್ರಿಲ್ 2022, 11:23 IST
ರಷ್ಯಾದ ದಾಳಿಯಿಂದ ತನ್ನ ಮಗನನ್ನು ಕಳೆದುಕೊಂಡ ಉಕ್ರೇನ್ ಮಹಿಳೆ ಹಾರ್ಕಿವ್‌ನಲ್ಲಿ ಕಣ್ಣೀರಿಟ್ಟ ಸಂದರ್ಭ– ರಾಯಿಟರ್ಸ್ ಚಿತ್ರ
ರಷ್ಯಾದ ದಾಳಿಯಿಂದ ತನ್ನ ಮಗನನ್ನು ಕಳೆದುಕೊಂಡ ಉಕ್ರೇನ್ ಮಹಿಳೆ ಹಾರ್ಕಿವ್‌ನಲ್ಲಿ ಕಣ್ಣೀರಿಟ್ಟ ಸಂದರ್ಭ– ರಾಯಿಟರ್ಸ್ ಚಿತ್ರ   

ಅಬುಧಾಬಿ: ಯುಎಇಯಲ್ಲಿ ತಾತ್ಕಾಲಿಕವಾಗಿ ಒಂದು ವರ್ಷ ನೆಲೆ ನಿಲ್ಲಲು ಉಕ್ರೇನ್ ನಾಗರಿಕರಿಗೆ ವಿಶೇಷ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ದುಬೈನಲ್ಲಿನ ಉಕ್ರೇನ್ ರಾಯಭಾರ ಕಚೇರಿ ಘೋಷಣೆ ಮಾಡಿದೆ.

ರಷ್ಯಾ–ಉಕ್ರೇನ್ ಯುದ್ದದಿಂದ ತೊಂದರೆಗೆ ಒಳಗಾದ ಉಕ್ರೇನ್ ನಾಗರಿಕರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಇದು ಯುಎಇ ದೇಶದ ವಿದೇಶಾಂಗ ಇಲಾಖೆಯ ಸಹಕಾರದೊಡನೆ ಕಾರ್ಯಗತವಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ದುಬೈನಲ್ಲಿನ ತಾಸ್‌ಹೀಲ್ ಕೇಂದ್ರಗಳಲ್ಲಿ ಅರ್ಜಿಗಳು ದೊರೆಯಲಿದ್ದು, ಇಲ್ಲಿ ತಾತ್ಕಾಲಿಕವಾಗಿ ಇರುವವರು ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ. ಅಲ್ಲದೇ ಈಗಾಗಲೇ ಯುಎಇಯಲ್ಲಿ ವೀಸಾ ಅವಧಿ ಮುಗಿದ ಉಕ್ರೇನ್‌ ನಾಗರಿಕರಿಗೆ ಒಂದು ವರ್ಷದ ಅವಧಿಗೆ ವೀಸಾ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ಯುಎಇ ದೇಶದ ಈ ಸಹಾಯಕ್ಕೆ ನಾವು ನಿಜಕ್ಕೂ ಚಿರಋಣಿಯಾಗಿರುತ್ತೇವೆ ಎಂದು ಉಕ್ರೇನ್ ರಾಯಭಾರ ಕಚೇರಿ ತಿಳಿಸಿದೆ.

ಏತನ್ಮಧ್ಯೆ ಯುಎಇ, ಉಕ್ರೇನ್‌ಗೆ ಸುಮಾರು 30 ಮೆಟ್ರಿಕ್ ಟನ್ ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳನ್ನು ನೀಡಿದೆ ಎಂದು ಉಕ್ರೇನ್ ರಾಯಭಾರ ಕಚೇರಿ ಸ್ಮರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.