ADVERTISEMENT

ಜಾನ್ಸನ್ & ಜಾನ್ಸನ್ ಏಕ ಡೋಸ್‌ ಕೋವಿಡ್ ಲಸಿಕೆ ಬಳಕೆಗೆ ಬ್ರಿಟನ್‌ ಅನುಮತಿ

ಏಜೆನ್ಸೀಸ್
Published 28 ಮೇ 2021, 15:32 IST
Last Updated 28 ಮೇ 2021, 15:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಜಾನ್ಸನ್ & ಜಾನ್ಸನ್‌ನ ಏಕ ಡೋಸ್‌ ಕೋವಿಡ್–19 ಲಸಿಕೆ ಬಳಕೆಗೆ ಬ್ರಿಟನ್‌ ಅನುಮತಿ ನೀಡಿದೆ. ಭಾರತದಲ್ಲಿ ಮೊದಲು ಕಂಡುಬಂದಿದೆ ಎನ್ನಲಾದ ರೂಪಾಂತರ ವೈರಸ್ ಸೋಂಕು ಹರಡುವಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

‘ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮಕಾರಿತ್ವ’ದ ಮಾನದಂಡಗಳನ್ನು ಜಾನ್ಸನ್ & ಜಾನ್ಸನ್‌ನ ಏಕ ಡೋಸ್‌ ಲಸಿಕೆ ಪೂರೈಸಿದೆ ಎಂದು ಬ್ರಿಟನ್‌ನ ಔಷಧ ಮತ್ತು ಆರೋಗ್ಯ ಉತ್ಪನ್ನ ನಿಯಂತ್ರಣ ಪ್ರಾಧಿಕಾರ ಹೇಳಿದೆ.

ಇದರೊಂದಿಗೆ, ಬ್ರಿಟನ್‌ನಲ್ಲಿ ನಾಲ್ಕನೇ ಕೋವಿಡ್ ಲಸಿಕೆಯ ಬಳಕೆಗೆ ಅನುಮೋದನೆ ನೀಡಿದಂತಾಗಿದೆ. ಫೈಜರ್–ಬಯೊಎನ್‌ಟೆಕ್, ಆಸ್ಟ್ರಾಜೆನೆಕಾ ಮತ್ತು ಮಾಡರ್ನಾ ಕೋವಿಡ್‌ ಲಸಿಕೆಗಳ ಬಳಕೆಗೆ ಈಗಾಗಲೇ ಅನುಮೋದನೆ ದೊರೆತಿದೆ.

ADVERTISEMENT

ಜಾನ್ಸನ್ & ಜಾನ್ಸನ್‌ ಲಸಿಕೆಯು ಕೋವಿಡ್ ಸೋಂಕು ತಡೆಯುವಲ್ಲಿ ಶೇ 67ರಷ್ಟು ಪರಿಣಾಮ ಹೊಂದಿದೆ ಹಾಗೂ ಸೋಂಕಿನ ಗಂಭೀರ ಪರಿಣಾಮಗಳಿಂದ ರಕ್ಷಿಸುವಲ್ಲಿ ಅಥವಾ ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶೇ 85ರಷ್ಟು ಪರಿಣಾಮಕಾರಿಯಾಗಿದೆ.ಈ ಲಸಿಕೆಯನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇಡಬೇಕಾಗುತ್ತದೆ. ಎಂದು ಪ್ರಾಧಿಕಾರ ಹೇಳಿದೆ.

ಬ್ರಿಟನ್‌ ಸರ್ಕಾರವು ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಈಗಾಗಲೇ ತ್ವರಿತಗೊಳಿಸಿದೆ. ದೇಶದ ಒಟ್ಟು ಜನಸಂಖ್ಯೆಯ ಶೇ 58ರಷ್ಟು ಮಂದಿಗೆ ಈಗಾಗಲೇ ಒಂದು ಡೋಸ್‌ ಲಸಿಕೆ ನೀಡಲಾಗಿದೆ. ಶೇ 35ರಷ್ಟು ಮಂದಿಗೆ ಎರಡನೇ ಡೋಸ್‌ ಅನ್ನೂ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.