ADVERTISEMENT

ಅಸ್ಸಾಂಜೆಯನ್ನು ಅಮೆರಿಕಕ್ಕೆ ಗಡಿಪಾರು ಮಾಡಲು ಬ್ರಿಟನ್ ಕೋರ್ಟ್ ಆದೇಶ

ಏಜೆನ್ಸೀಸ್
Published 20 ಏಪ್ರಿಲ್ 2022, 11:00 IST
Last Updated 20 ಏಪ್ರಿಲ್ 2022, 11:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಇರಾಕ್ ಮತ್ತು ಅಫ್ಗಾನಿಸ್ತಾನದ ಯುದ್ಧಗಳಿಗೆ ಸಂಬಂಧಿಸಿದಂತೆ ರಹಸ್ಯ ಕಡತಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ವಿಚಾರಣೆ ಎದುರಿಸಲು ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡಬೇಕು ಎಂದು ಬ್ರಿಟನ್ ನ್ಯಾಯಾಲಯವೊಂದು ಬುಧವಾರ ಆದೇಶ ಹೊರಡಿಸಿದೆ.

ಇದೀಗ ಅಸ್ಸಾಂಜೆ ಅವರನ್ನು ಗಡಿಪಾರುಮಾಡುವ ವಿಚಾರದ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ಆಂತರಿಕ ಸಚಿವೆ ಪ್ರೀತಿ ಪಟೇಲ್ ಅವರ ಮೇಲಿದೆ. ಒಂದು ವೇಳೆ ಅವರು ಗಡಿಪಾರು ಅನುಮೋದನೆ ನೀಡಿದಲ್ಲಿ, ಅಸ್ಸಾಂಜೆ ವಕೀಲರು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

2010ರಲ್ಲಿ ಅಮೆರಿಕದ ಸಾವಿರಾರು ರಹಸ್ಯ ಕಡತಗಳ ಬಗ್ಗೆ ವಿಕಿಲೀಕ್ಸ್ ವರದಿ ಮಾಡಿತ್ತು. ಆ ಬಳಿಕ ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜೆ ವಿರುದ್ಧ ಅಮೆರಿಕವು ಬೇಹುಗಾರಿಕೆ ಕಾನೂನಿನ ಉಲ್ಲಂಘನೆ ಸೇರಿದಂತೆ 18 ಪ್ರಕರಣಗಳನ್ನು ದಾಖಲಿಸಿತ್ತು. ಈ ಪ್ರಕರಣಗಳ ವಿಚಾರಣೆಗಾಗಿ ಅಸ್ಸಾಂಜೆ, ಅಮೆರಿಕ ಸರ್ಕಾರಕ್ಕೆ ಬೇಕಾಗಿದ್ದಾರೆ.

ADVERTISEMENT

ಆದರೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಅಸ್ಸಾಂಜೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.